ನಿವೃತ್ತ ಪಶು ವೈದ್ಯಾಧಿಕಾರಿ ಕುಂಜಾಡಿ ಸೋಮಶೇಖರ್ ರೈ ನಿಧನ

0

ಪುತ್ತೂರು: ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ, ಸುಳ್ಯ ತಾಲ್ಲೂಕು ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಸೋಮಶೇಖರ್ ರೈ ಕುಂಜಾಡಿ (75 ವ) ರವರು ಫೆ.25 ರಂದು ನಿಧನರಾದರು.

ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಲಯನ್ಸ್ ರಿಜನಲ್ ಚೇರ್ ಮ್ಯಾನ್ ಆಗಿದ್ದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಸಹೋದರ ಮಂಜುನಾಥ ರೈ ಕುಂಜಾಡಿ, ಪತ್ನಿ ಶಾಲಿನಿ ರೈ, ಪುತ್ರಿಯರಾದ ಸ್ಮಿತಾ, ಶ್ರುತಾ, ಅಳಯಂದಿರಾದ ರಾಜೇಶ್ ನಾಯಕ್, ಸತೀಶ್ ಶೆಟ್ಟಿ ರವರನ್ನು ಅಗಲಿದ್ದಾರೆ.

ಫೆ.26 ಕುಂಜಾಡಿಯಲ್ಲಿ ಅಂತ್ಯಸಂಸ್ಕಾರ: ಮೃತರ ಅಂತ್ಯ ಸಂಸ್ಕಾರ ಫೆ.26 ರಂದು ಮಧ್ಯಾಹ್ನ 12.30 ಕ್ಕೆ ಕುಂಜಾಡಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here