ಕಾವು: ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕ್ಯೂಟ್- ಗೇರು ತೋಟಕ್ಕೆ ಬೆಂಕಿ

0

ಕಾವು : ಮಾಡ್ನೂರು ಗ್ರಾಮದ ಸಸ್ಪೆಟ್ಟಿಯಲ್ಲಿ ವಿದ್ಯುತ್ ಪರಿವರ್ತಕದಿಂದ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿಯ ಕಿಡಿ ಹಚ್ಚಿಕೊಂಡು ರಾಮಕೃಷ್ಣ ಬಿಎಸ್ ಬರೆಕೆರೆ ರವರ ಸುಮಾರು ಅರ್ಧ ಎಕ್ರೆಯಷ್ಟು ಜಾಗದಲ್ಲಿರುವ ಗೇರು ಮರಗಳು ಸುಟ್ಟು ಹೋಗಿ ನಷ್ಟ ಉಂಟಾದ ಘಟನೆ ಫೆ.24ರಂದು ಮಧ್ಯಾಹ್ನದ ವೇಳೆ ನಡೆದಿದೆ.

ಅಗ್ನಿಶಾಮಕ ದಳದವರು ಮತ್ತು ಸಾರ್ವಜನಿಕರ ಪ್ರಯತ್ನದಿಂದ ಬೆಂಕಿಯನ್ನು ನಂದಿಸಲಾಯಿತು.

ವಿದ್ಯುತ್ ಪರಿವರ್ತಕದ ಸುತ್ತವಿರುವ ಹುಲ್ಲು, ಪೊದೆಗಳನ್ನು ಕಡಿಯದೇ ಇರುವುದೇ ಅನಾಹುತಕ್ಕೆ ಕಾರಣವೆಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here