ಕಡಬದಲ್ಲಿ ಆನೆದಾಳಿಗೆ ಒಳಗಾದ ರಮೇಶ್ ರೈ ನೈಲ, ರಂಜಿತಾ ರೈ ನೈಲರವರಿಗೆ ಶ್ರದ್ಧಾಂಜಲಿ
ಪುತ್ತೂರು: ಪುತ್ತೂರು ತಾಲೂಕು ಬಂಟರ ಸಂಘದ ಕಾರ್‍ಯಕಾರಿ ಸಮಿತಿ ಸಭೆಯು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಫೆ. 21 ರಂದು ಜರಗಿತು.
ಫೆ. 20 ರಂದು ಕಡಬ ತಾಲೂಕು ರೆಂಜಲಾಡಿಯಲ್ಲಿ ಆನೆದಾಳಿಗೆ ಒಳಗಾಗಿ ಹತರಾದ ಬಂಟ ಸಮಾಜದ ಬಂಧುಗಳಾದ ರಮೇಶ್ ರೈ ನೈಲ ಮತ್ತು ರಂಜೀತಾ ರೈ ನೈಲರವರಿಗೆ ಬಂಟರ ಸಂಘದಿಂದ ಶ್ರದ್ಧಾಂಜಲಿ, ಸಲ್ಲಿಸಿ, ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಅವರ ಅತ್ಮಕ್ಕೆ ಚಿರಶಾಂತಿಯನ್ನು ಕೋರಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ವಹಿಸಿದ್ದರು. ಬಂಟರ ಸಂಘದಿಂದ ಸಮಾಜದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ, ಸನ್ಮಾನಿಸುವ ಕಾರ್‍ಯಕ್ರಮವನ್ನು ಮಾ. 12 ರಂದು ಮಾಡುವುದೆಂದು ಸಭೆಯಲ್ಲಿ ತಿರ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಬಂಟರ ಸಂಘದ ನಿಕಟಪೂರ್ವಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಹಾಗೂ ಬಂಟರ ಸಂಘದ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ಬಂಟರ ಯಾನೆ ನಾಡವರ ಮಾತೃ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕ ಮಂದಿ ಭಾಗವಹಿಸಿದರು. ಬಂಟರ ಸಂಘದ ಪ್ರಧಾನಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ವಂದಿಸಿದರು.