ಪುತ್ತೂರು: ನಾನು, ನನ್ನ ಮನೆ ಅದು ಸಂಘದ ಮನೆ , ನನ್ನ ಮನೆ ಸದಸ್ಯರು ಹುಟ್ಟಿನಿಂದಲೇ ಬಿಜೆಪಿ ತತ್ವಕ್ಕೆ ಬದ್ಧರಾಗಿರುವವರು. ನಾನು ಅವತ್ತು ಬಿಜೆಪಿ ನಾಳೆಯೂ ಬಿಜೆಪಿ ನನ್ನ ಕೊನೆದಿನದವರೆಗೂ ಬಿಜೆಪಿಗಾಗಿ ದುಡಿಯುವ ಯಾಕೆಂದರೆ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನ್ನನು ಯಾಕೆ ಪಕ್ಷ ದಿಂದ ವಜಾಮಾಡಿದ್ದಾರೆ ಎಂಬುದು ತಿಳಿದಿಲ್ಲ ಎಂದು ಮನೀಶ್ ಕುಲಾಲ್ ಅವರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ವಜಾ ಗೊಳಿಸಿರುವುದು ನನಗೆ ಬೇಸರವಿಲ್ಲ ಯಾಕೆಂದರೆ ನನ್ನನು ಪಕ್ಷದಿಂದ ವಜಾಮಾಡಿದವರು ನನ್ನಷ್ಟು ತತ್ವ ಸಿದ್ಧಾಂತಕ್ಕೆ ಬದ್ಧರಾದವರಲ್ಲ ಎಂದು ನನಗೆ ಸ್ಪಷ್ಟವಾಗಿ ಗೊತ್ತಿದೆ. ನಾನು ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ಕಾರಣ ಹಿರಿಯರಿಗೆ (ಜವಾಬ್ದಾರಿಗೆ ) ಗೌರವ ನೀಡುತ್ತೇನೆ. ಪಕ್ಷದ ತತ್ವ ಅದು ಕಾರ್ಯಕರ್ತ ಪ್ರಧಾನ ಅದನ್ನು ತಪ್ಪಿ ನಡೆದವರಿಗೆ ಪ್ರಶ್ನೆ ಮಾಡಿದ್ದು ತಪ್ಪು ಎಂಬುದು ನಿಮ್ಮ ಅಭಿಪ್ರಾಯವಾದರೆ ಅದು ನನ್ನ ಪಕ್ಷ ಕಾರ್ಯದ ಸಂದರ್ಭ ಭುಜಕ್ಕೆ ಏರಿದ ಒಂದು ಸ್ಟಾರ್ ಎಂಬ ಹೆಮ್ಮೆಯಿದೆ. ಮತ್ತೊಮೆ ಹೇಳುವೆ ಬೇಕಾದರೆ ನಾನು ಅಂದು ಇಂದು ಎಂದೆಂದಿಗೂ ರಾಷ್ಟ್ರೀಯತೆಯ ಪಕ್ಷ ಬಿಜೆಪಿಯ ಕಟ್ಟರ್ ಕಾರ್ಯಕರ್ತ ಎಂದು ಮನೀಶ್ ಕುಲಾಲ್ ಬನ್ನೂರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.