ಪುತ್ತೂರು: ತಿಂಗಳಾಡಿ ಮಸೀದಿ ಸಮೀಪ ಕಾರ್ ವಾಶ್ ಸರ್ವಿಸ್ ಫೆ.27ರಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ ಇಲ್ಲಿ ಶುಭಾರಂಭಗೊಂಡಿರುವ ಕಾರ್ ವಾಶ್ ಸರ್ವಿಸ್ ಮೂಲಕ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ಲಭ್ಯವಾಗಲಿ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಉದ್ಯಮಿ ಪಿ.ಕೆ ಮಹಮ್ಮದ್ ಕೂಡುರಸ್ತೆ, ತಿಂಗಳಾಡಿ ಶಂಸುಲ್ ಉಲಮಾ ಸೆಂಟರ್ನ ಅಧ್ಯಕ್ಷ ಸಿದ್ದಿಕ್ ಸುಲ್ತಾನ್ ಕೂಡುರಸ್ತೆ, ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ರಾಮಚಂದ್ರ ಸೊರಕೆ, ಪ್ರಮುಖರಾದ ಸಾರ್ಥಕ್ ರೈ ಅರಿಯಡ್ಕ, ಶರೀಫ್ ಕೊಯ್ಲ, ಉದ್ಯಮಿಗಳಾದ ಪುರಂದರ ರೈ ಕೋರಿಕ್ಕಾರು, ಸುರೇಶ್ ರೈ ತಿಂಗಳಾಡಿ, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ, ಭಾಸ್ಕರ ರೈ ಮಾದೋಡಿ, ಪ್ರಗತಿಪರ ಕೃಷಿಕ ಸುಭಾಷ್ ರೈ ಕಡೆಮಜಲು, ಆರ್ಯಾಪು ಗ್ರಾ.ಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ, ತಾ.ಪಂ ಮಾಜಿ ಸದಸ್ಯರಾದ ಅಬ್ದುಲ್ ರಹಿಮಾನ್ ಹಾಜಿ ಅರ್ತಿಕೆರೆ, ಮಹಮ್ಮದ್ ಬಡಗನ್ನೂರು, ಮಹಮ್ಮದ್ ಹಾಜಿ ಕಣ್ಣೂರು, ಪುರಂದರ ರೈ ಪಂಚಮಿ, ವಸಂತ್ ರೈ ಪದ್ಮಶ್ರೀ, ವಿಶ್ವಜಿತ್ ಅಮ್ಮುಂಜ, ಜಯರಾಮ ರೈ, ಹಂಝತ್ ಕಣ್ಣೂರು, ಶಿಯಾಬ್ ಕಣ್ಣೂರು, ಸೀತರಾಮ ರೈ ಬಾಳಾಯ, ಸಿದ್ದೀಕ್ ತಿಂಗಳಾಡಿ, ರಘುನಾಥ ರೈ ಚಾವಡಿ, ತಾರಾ ಬಳ್ಳಾಲ್, ಚಂದ್ರಹಾಸ ಬಳ್ಳಾಲ್, ರಾಮ್ದಾಸ್ ರೈ ಮದ್ಲ, ರೇವತಿ, ಜೀವಿತಾ ಮೊದಲಾದವರು ಆಗಮಿಸಿ ಶುಭ ಹಾರೈಸಿದರು. ಉದ್ಯಮಿ ಹಿದಾಯತ್ ಕಣ್ಣೂರು ಮಾಲಕರಾದ ಹಬೀಬ್ ಕಣ್ಣೂರು ಹಾಗೂ ಸೋಮಶೇಖರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ ವಾಶ್ಗೆ ಚಾಲನೆ:
ಕಾರ್ ವಾಶ್ ಸರ್ವಿಸ್ ಸಂಸ್ಥೆಯ ಮಾಲಕ ಹಬೀಬ್ ಕಣ್ಣೂರು ಅವರ ತಂದೆ ಉದ್ಯಮಿ ಯೂಸುಫ್ ಹಾಜಿ ಕಣ್ಣೂರು ಅವರು ಕಾರ್ ವಾಶ್ಗೆ ಚಾಲನೆ ನೀಡಿ ಶುಭ ಹಾರೈಸಿದರು.
ಬಾವಿ ನೀರಿನಲ್ಲಿ ವಾಶ್:
ತಿಂಗಳಾಡಿಯಲ್ಲಿ ನೂತನವಾಗಿ ಶುಭಾರಂಭಗೊಂಡ ಕಾರ್ ವಾಶ್ ಸರ್ವಿಸ್ ಸಂಸ್ಥೆಯಲ್ಲಿ ಎಲ್ಲಾ ವಿಧದ ವಾಹನಗಳನ್ನು ಕ್ಲಪ್ತ ಸಮಯದಲ್ಲಿ ವಾಶ್ ಮಾಡಿ ಕೊಡಲಾಗುವುದು. ನಮ್ಮಲ್ಲಿ ಬಾವಿಯ ನೀರಿನ ಮೂಲಕ ವಾಹನಗಳನ್ನು ವಾಶ್ ಮಾಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರಾದ ಹಬೀಬ್ ಕಣ್ಣೂರು ಹಾಗೂ ಸೋಮಶೇಖರ ತಿಳಿಸಿದ್ದಾರೆ.