ಮಾ.1:ಪ್ರೀಮಾ ಮೆಟಲ್ ಮಾರ್ಟ್ ಸ್ಥಳಾಂತರಗೊಂಡು ಎಂ.ಟಿ ರಸ್ತೆ ಬಳಿ ಶುಭಾರಂಭ

0

ಪುತ್ತೂರು: ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳು, ಗಿಫ್ಟ್ ಆರ್ಟಿಕಲ್ಸ್, ಪ್ಲಾಸ್ಟಿಕ್ ಹಾಗೂ ಪೂಜಾ ಸಾಮಾಗ್ರಿಗಳ ಉದ್ಯಮದಲ್ಲಿ ಸುಮಾರು 15 ವರ್ಷಕ್ಕೂ ಮಿಕ್ಕಿ ಅನುಭವ ಹೊಂದಿರುವ ‘ಪ್ರೀಮಾ ಮೆಟಲ್ ಮಾರ್ಟ್’ ಸಂಸ್ಥೆಯು ಮಾ.1 ರಂದು ಎಂ.ಟಿ ರಸ್ತೆಯಲ್ಲಿನ ಸ್ಟೈಲ್ ಪಾರ್ಕ್(ಹಿಂದಿನ ಪೂಜಾ ಹೊಟೇಲ್) ಬಳಿ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.

ಪ್ರೀಮಾ ಮೆಟಲ್ ಮಾರ್ಟ್ ಸಂಸ್ಥೆಯು ಈ ಹಿಂದೆ ಪುತ್ತೂರು ಮುಖ್ಯರಸ್ತೆಯ ಜಿ.ಎಲ್ ಮಾಲ್ ಬಳಿಯ ಲಕ್ಷ್ಮೀ ಹೊಟೇಲ್ ಎದುರುಗಡೆ ವ್ಯವಹರಿಸುತ್ತಿದ್ದು, ಇದೀಗ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿಶಾಲವಾದ ವ್ಯವಸ್ಥೆಯೊಂದಿಗೆ ತೆರೆದುಕೊಂಡು ಸ್ಥಳಾಂತರಗೊಳ್ಳಲಿದೆ.

ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ನೂತನ ಸಂಸ್ಥೆಯನ್ನು ಆಶೀರ್ವಚಿಸಲಿದ್ದು, ಹಲವಾರು ಮಂದಿ ಅತಿಥಿ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಗ್ರಾಹಕರು ಎಂದಿನಂತೆ ಆಗಮಿಸಿ, ಪ್ರೋತ್ಸಾಹಿಸಬೇಕಾಗಿ ಸಂಸ್ಥೆಯ ಮಾಲಕರಾದ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ವಿಜಯ್ ಮಸ್ಕರೇನ್ಹಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here