ಜೆ.ಇ.ಇ ಮೈನ್ಸ್2 ಪ್ರವೇಶ ಪರೀಕ್ಷೆಯಲ್ಲಿ ಇಂದ್ರಪ್ರಸ್ಥ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

0

ಉಪ್ಪಿನಂಗಡಿ: 2022-23ರ ಜೆ.ಇ.ಇ ಪ್ರವೇಶ ಪರೀಕ್ಷೆಯ ಬಿ ಪ್ಲಾನಿಂಗ್ ವಿಭಾಗದಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಆಶ್ರಯದತ್ತ ಎಮ್.ಕೆ, ಶ್ರೀಹರಿ ಐ.ಬಿ ಮತ್ತು ಆದೇಶ್ ಬಿ. ರೈ ರವರು ಉತ್ತಮ ಸಾಧನೆ ಮಾಡಿದ್ದಾರೆ.

ಆಶ್ರಯದತ್ತ ಎಮ್. ಕೆ. ಶೇ.98.01 ಶ್ರೀಹರಿ ಐ.ಬಿ ಶೇ.94.5 ಹಾಗೂ ಆದೇಶ್ ಬಿ. ರೈ ಶೇ.92 ಅಂಕ ಗಳಿಸಿದ್ದಾರೆ.

ಈ ಫಲಿತಾಂಶವು ಅತ್ಯಂತ ಆಶಾದಾಯಕವಾಗಿದ್ದು ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಹಿರಿಮೆಯಾಗಿದೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ಜೆ.ಇ.ಇ ಅರ್ಹತೆಯನ್ನು ಪಡೆಯುತ್ತಿದ್ದು ಪ್ರಸಕ್ತ ಸಾಲಿನಲ್ಲೂ ಈ ವಿದ್ಯಾರ್ಥಿಗಳು ಪ್ರಶಂಸನೀಯ ಸಾಧನೆಯನ್ನು ಮಾಡಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here