ಪುತ್ತೂರು:ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಕಾರೊಂದು ಹಿಂದಿನಿಂದ ಡಿಕ್ಕಿಯಾದ ಘಟನೆ ಫೆ.27ರಂದು ಆರ್ಯಾಪು ಗ್ರಾಮದ ಚೆನ್ನಡ್ಕದಲ್ಲಿ ನಡೆದಿದೆ.
ಆರ್ಯಾಪು ಗ್ರಾಮದ ದೊಡ್ಡಡ್ಕ ನಿವಾಸಿ ಗಿರಿಜಾ ಅವರು ಗಾಯಗೊಂಡವರು.ಅವರು ಒಳತ್ತಡ್ಕದಲ್ಲಿ ಧರ್ಮಸ್ಥಳ ಸ್ವಸಹಾಯ ಗುಂಪಿನ ಸಾಲ ಕಟ್ಟಲು ಹೋಗಲೆಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಚೆನ್ನಡ್ಕದಲ್ಲಿ ಅವರ ಹಿಂಬದಿಯಿಂದ ಬಂದ ಕಾರೊಂದು ಅವರಿಗೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಗಿರಿಜಾ ಅವರ ತಲೆಗೆ ಗಾಯವಾಗಿದೆ. ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.