ಪಮ್ಮಲೆ ಮಖಾಂ ಆಂಡ್‌ನೇರ್ಚೆ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಇತಿಹಾಸ ಪ್ರಸಿದ್ದ ಪಮ್ಮಲೆ (ಪಡುಮಲೆ) ಮಖಾಂ ಆಂಡ್‌ನೇರ್ಚೆಯು ಮಾ. 17,18,19 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಪಮ್ಮಲೆ ಮಸೀದಿ ವಠಾರದಲ್ಲಿ ನಡೆಯಿತು.


ವರ್ಷಂಪ್ರತಿ ನಡೆಯುವ ಮಖಾಂ ಆಂಡ್ ನೇರ್ಚೆ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಬಣೆಯಿಂದ ಜರಗಲಿದೆ. ಈ ಸಂದರ್ಭದಲ್ಲಿ ಜಮಾತ್ ಅಧ್ಯಕ್ಷರಾದ ಹಾಜಿ ಮಹಮ್ಮದ್ ಬಡಗನ್ನೂರು, ಜಮಾತ್ ಖತೀಬ್ ಸಂಶುದ್ದೀನ್ ದಾರಿಮಿ, ಜಮಾತ್ ಉಪಾಧ್ಯಕ್ಷರಾದ ಫಕ್ರುದ್ದೀನ್ ಹಾಜಿ, ಕೋಶಾಧಿಕಾರಿ ಅಬೂಬಕ್ಕರ್ ಹಾಜಿ ಕುಕ್ಕಾಜೆ, ಸದಸ್ಯರಾದ ಸೀದಿ ಹಾಕಿ ಕೊಯಿಲ, ಕಾರ್ಯದರ್ಶಿ ಆಲಿಕುಂಞಿ ಕಾವುಂಜ, ಆಲಿಕುಂಞಿ ಡೆಂಬಳೆ, ಆದಂ ಹಾಜಿಡೆಂಬಳೆ, ಮುಅಲ್ಲಿಂ ಶಾಫಿ ಅಝ್‌ಹರಿ, ಮತ್ತು ಜಮಾತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here