ಮಾ.5ಕ್ಕೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ 7ನೇ ವರ್ಷದ ’ನರ್ತನಾವರ್ತನ’
ವಿದುಷಿ ಸುಮಂಗಲಾ ರತ್ನಾಕರ್‌ಗೆ ಕಲಾಶ್ರಯ ಪ್ರಶಸ್ತಿ ಪ್ರದಾನ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಸಾಂಸ್ಕೃತಿಕ ಸಚಿವಾಲಯದ ಸಹಕಾರದೊಂದಿಗೆ 7ನೇ ವರ್ಷದ ’ನರ್ತನಾವರ್ತನಾ -2023’ ಮಾ.5ರಂದು ಸಂಜೆ ಬಪ್ಪಳಿಗೆ ಜೈನ ಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ನಾಟ್ಯಾರಾಧನಾ ಮತ್ತು ಯಕ್ಷರಾಧನ ಕಲಾಕೇಂದ್ರದ ನಿರ್ದೇಶಕಿ ವಿದುಷಿ ಸುಮಂಗಲಾ ರತ್ನಾಕರ್ ಅವರಿಗೆ ’ಕಲಾಶ್ರಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದುಷಿ ಪ್ರೀತಿಕಲಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಲಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಚೆನ್ನೈ ಮೂಲದ ದಂಪತಿ ವಿದ್ವಾನ್ ರೆಂಜಿತ್ ಮತ್ತು ಶ್ರೀಮತಿ ವಿಜ್ಞಾ, ಚೆನ್ನೈ ಅವರು ಭರತನಾಟ್ಯ ಪ್ರಸ್ತುತಿಯನ್ನು ನೀಡಲಿದ್ದಾರೆ. ಇವರಿಗೆ ನಟುವಾಂಗದಲ್ಲಿ ಕೆ.ಎಸ್.ಬಾಲಕೃಷ್ಣನ್, ಗಾಯನದಲ್ಲಿ ಬಿನು ವೇಣುಗೋಪಾಲ್, ಮೃದಂಗದಲ್ಲಿ ಪಿ.ಕೆ.ಶಿವಪ್ರಸಾದ್, ಪಿಟೀಲಿನಲ್ಲಿ ಟಿ.ವಿ.ಸುಕನ್ಯಾ ಅವರು ಸಹಕರಿಸಲಿದ್ದಾರೆ ಎಂದು ಅವರು ಹೇಳಿದರು.

ಕಲಾಶ್ರಯ ಪ್ರಶಸ್ತಿ ಪ್ರದಾನ:
ಕಲಾಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಅವರಿಗೆ ಕಲಾಶ್ರಯ ಪ್ರಶಸ್ತಿಯನ್ನು ಪ್ರತಿ ವರ್ಷದಂತೆ ಈ ಬಾರಿ ನೃತ್ಯಕ್ಷೇತ್ರದಲ್ಲಿ ಸಾಧಕಿಯಾಗಿರುವ ಮಂಗಳೂರು ನಾಟ್ಯಾರಾಧನಾ ಮತ್ತು ಯಕ್ಷರಾಧನ ಕಲಾಕೇಂದ್ರದ ನಿರ್ದೇಶಕಿ ವಿದುಷಿ ಸುಮಂಗಲಾ ರತ್ನಾಕರ್ ಅವರಿಗೆ ’ಕಲಾಶ್ರಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ ಕುಮಾರ್ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದು ವಿದುಷಿ ಪ್ರೀತಿಕಲಾ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನೃತ್ಯಗುರು ವಿದ್ವಾನ್ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.

ಮಾ.6, 7ಕ್ಕೆ ಕಾರ್ಯಾಗಾರ
ವಿದ್ವಾನ್ ರೆಂಜಿತ್ ಮತ್ತು ಶ್ರೀಮತಿ ವಿಜ್ಞಾ, ಚೆನ್ನೈ ಅವರಿಂದ ಮಾ.6 ಮತ್ತು 7 ರಂದು ದರ್ಬೆ ಶ್ರೀ ಶಶಿಶಂಕರ ಸಭಾಂಗಣದಲ್ಲಿ ನೃತ್ಯದ ಕುರಿತು ವಿಶೇಷ ಕಾರ್ಯಾಗಾರ ಬೆಳಗ್ಗಿನಿಂದ ಮಧ್ಯಾಹ್ನದ ತನಕ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ವಿದ್ವಾನ್ ಬಿ ದೀಪಕ್ ಕುಮಾರ್ ತಿಳಿಸಿದರು.

LEAVE A REPLY

Please enter your comment!
Please enter your name here