ಕಾಣಿಯೂರು: ಚಾರ್ವಾಕ ಸವಣೂರು ವಿವೇಕ ಜಾಗೃತ ಬಳಗ ಆಶ್ರಯದಲ್ಲಿ ಕೆ. ವಿ. ಮಾಧವ ಕರಂದ್ಲಾಜೆಯವರ ಮನೆಯಲ್ಲಿ ಭಜನೆ ಮತ್ತು ಸತ್ಸಂಗ ಕಾರ್ಯಕ್ರಮ
ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಡಿವೈನ್ ಪಾರ್ಕ್ ಸಾಲಿಗ್ರಾಮದ ಸಂಪನ್ಮೂಲ ವ್ಯಕ್ತಿ ಸುಂದರ ಗೌಡ ಎನೇಕಲ್ಲು ಭಾಗವಹಿಸಿ, ಇಂದು ಸಮಾಜದಲ್ಲಿ ಮನೆ ಮನೆಗಳಲ್ಲಿ ಅಸಮಾಧಾನ ಅಶಾಂತಿ ಕಾಣುತ್ತಿದ್ದೇವೆ. ಆಧುನಿಕತೆಯ ಧಾವಂತದಲ್ಲಿ ಧಾರ್ಮಿಕ ಆಚರಣೆಗಳು ಭಜನೆ ಸತ್ಸಂಗಗಳು ವಿರಳವಾಗಿವೆ.
ಆದರೆ ಧನ ಕನಕ ಅಧಿಕಾರದಿಂದ ಶಾಂತಿ ಸಮಾಧಾನ ದೊರಕದು. ನಮ್ಮ ಸಂಸ್ಕೃತಿಯಲ್ಲಿ ಅಧ್ಯಾತ್ಮಿಕತೆಗೆ ಮಹತ್ವ ಕಲ್ಪಿಸಲಾಗಿದೆ. ಮನೆ ಮನೆಗಳಲ್ಲಿ ಭಜನೆ ಸತ್ಸಂಗ ನಡೆಸುವ ಕಾಯಕದಲ್ಲಿ ವಿವೇಕ ಜಾಗೃತ ಬಳಗಗಳು ತೊಡಗಿಕೊಂಡಿವೆ. ಶ್ರೀ ರಾಮ ರಕ್ಷಾ ಸ್ತೋತ್ರ ಪಠನೆಯಿಂದ ಅದ್ಭುತ ಪರಿಣಾಮ ಉಂಟಾಗುತ್ತದೆ ಬದುಕು ಬಂಗಾರವಾಗುತ್ತದೆ ಎಂದರು.
ಚಾರ್ವಾಕ ಶ್ರೀ ಕಪಿಲೇಶ್ವರ ಮಹಿಳಾ ಭಜನಾ ಮಂಡಳಿ ಸದಸ್ಯೆಯರು ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು. ಕೆ. ವಿ. ಮಾಧವ ಕಾರ್ಯಕ್ರಮ ನಿರೂಪಿಸಿದರು. ಬಳಗದ ಅಧ್ಯಕ್ಷೆ ಸುನಂದಾ ಮಾಧವ ಕಾರ್ಯಕ್ರಮ ಸಂಯೋಜಿಸಿದರು. ಕುಶಾಲಪ್ಪ ಗೌಡ ದೈಪಿಲ, ಉಳವ ಮೋನಪ್ಪ ಗೌಡ, ಆನಂದ ಕುಂಬಾರ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.