ಪುತ್ತೂರು; ಅಜಲಡ್ಕ ಕೆರೆಯ ಹೂಳೆತ್ತುವ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮವು ಮಾ. 2 ರಂದು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ನೆರವೇರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ತಾಲೂಕು, ಗ್ರಾಮ ಪಂಚಾಯತ್ ಒಳಮೊಗ್ರು, ಅಜಲಡ್ಕಕೆರೆ ಸಮಿತಿ, ಇವರ ಸಂಯೋಗದಲ್ಲಿ 541ನೇ ನಮ್ಮೂರ ನಮ್ಮ ಕೆರೆ ಹೂಳೆತ್ತುವ ಕಾರ್ಯ ಪ್ರಾರಂಭಗೊಂಡಿದೆ.
ವೇದಿಕೆಯಲ್ಲಿ ಕೆರೆ ಸಮಿತಿಯ ಗೌರವ ಅಧ್ಯಕ್ಷರಾದ ರಾಧಾಕೃಷ್ಣ ಬೂಡಿಯಾರು ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಆನಂದ, ತಾಲೂಕು ಪಂಚಾಯತ್ ಸಹಾಯಕ ನಿದೇರ್ಶಕಿ ಶೈಲಜಾಭಟ್, ಕೆರೆ ಸಮಿತಿ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರೀವೇಣಿ ಪಲ್ಲತ್ತಾರು, ಗ್ರಾಮಾಭಿವೃದ್ಧಿ ಯೋಜನೆ ವಲಯಾಧ್ಯಕ್ಷರಾದ ಮಾಧವ ರೈ ಕುಂಬ್ರ, ,ಕುಂಬ್ರ ಜನಜಾಗೃತಿ ವಲಯಾಧ್ಯಕ್ಷರಾದ ಪ್ರಕಾಶ್ಚಂದ್ರ ರೈ ಕೈಕಾರ, ಬಾಳಪ್ಪ ರೈ ಹಿರಿಯರು, ಒಳಮೊಗ್ರು ಗ್ರಾಪಂ ಉಪಸ್ಥಿತರಿದ್ದರು.
ಕುಂಬ್ರ ವಲಯದ ಮೇಲ್ವಿಚಾರಕಿ ರಾಜೀವಿ ಸ್ವಾಗತಿಸಿದರು. ಸೇವಾಪ್ರತಿನಿಧಿ ಅಕ್ಷತಾ ವಂದಿಸಿದರು. ಉಮೇಶ್ ಬಿ ಕೃಷಿ ಮೇಲ್ವಿಚಾರಕರು ನಿರೂಪಣೆ ಮಾಡಿದರು. ಒಳಮೊಗ್ರು ಗ್ರಾಮಪಂಚಾಯತ್ ಸದಸ್ಯರು, ಕೆರೆ ಸಮಿತಿ ಪದಾಧಿಕಾರಿಗಳು. ಸದಸ್ಯರು, ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಸೇವಾಪ್ರತಿನಿಧಿಗಳು ಹಾಗೂ ಊರ ಪರ ಊರ ಗಣ್ಯರು, ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.