ಪುತ್ತೂರು: ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ, ನಿಗದಿತ ದರಕ್ಕಿಂತ ಹೆಚ್ಚಿಗೆ ಬಾಡಿಗೆ ಪಡೆಯದಂತೆ ಹಾಗೂ ವಾಹನ ದಾಖಲಾತಿ ಗಳನ್ನು ಅಪ್ಡೇಟ್ ಮಾಡಿಕೊಳ್ಳುವಂತೆ,
ಸಂಚಾರಿ ಕಾನೂನುಗಳ ತಿಳುವಳಿಕೆ ಕುರಿತು ದ.ಕ.ಜಿಲ್ಲಾ ಎಸ್ಪಿ ಡಾ. ವಿಕ್ರಂ ಅಮ್ಟೆಯವರ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಗಳ ಪಿಎಸ್‌ಐ ರವರುಗಳು
ತಮ್ಮ ವ್ಯಾಪ್ತಿಯ ಆಟೋ ಸ್ಟಾಂಡ್ ಗಳಿಗೆ ಭೇಟಿ ನೀಡಿ ಆಟೋ ಚಾಲಕರ ಸಭೆ ನಡೆಸಿದರು.