ಕುಂಬ್ರ ವರ್ತಕರ ಸಂಘದಿಂದ ಚಿಕಿತ್ಸೆಗೆ ಧನ ಸಹಾಯ

0

ಪುತ್ತೂರು: ಇತ್ತೀಚೆಗೆ ವಿದ್ಯುತ್ ವಯರಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಯ ತಪ್ಪಿ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆರ್ಯಾಪು ಗ್ರಾಮದ ಗುಳಿಗಜರಿ ನಿವಾಸಿ ಜಗದೀಶ್ ಎಂಬವರ ಚಿಕಿತ್ಸೆಗೆ ಕುಂಬ್ರ ವರ್ತಕರ ಸಂಘದಿಂದ ರೂ.26,700/-ನ್ನು ಜಗದೀಶ್‌ರವರ ಪತ್ನಿ ವಿಂದ್ಯಾರವರಿಗೆ ನೀಡಲಾಯಿತು.

ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರು ಸಹಾಯಧನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ವರ್ತಕರ ಸಂಘದ ಸ್ಥಾಪಕಾಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಪ್ರ.ಕಾರ್ಯದರ್ಶಿ ಭವ್ಯ ರೈ ಉಪಸ್ಥಿತರಿದ್ದರು.

ಜಗದೀಶ್‌ರವರು ಈಗಾಗಲೇ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಸುಮಾರು 8ಲಕ್ಷ ರೂ.ತನಕ ಖರ್ಚಾಗಿದ್ದು ಪ್ರಸ್ತುತ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿರುವ ಬಡ ಕುಟುಂಬ ಇದಾಗಿದ್ದು ಚಿಕಿತ್ಸೆಗೆ ಇನ್ನಷ್ಟು ಹಣದ ಅವಶ್ಯಕತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ವರ್ತಕರ ಸಂಘದ ವಾಟ್ಸಫ್ ಗ್ರೂಪ್‌ನಲ್ಲಿ ಧನ ಸಹಾಯಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಂಗ್ರಹವಾದ ಹಣವನ್ನು ಜಗದೀಶ್ ಕುಟುಂಬಕ್ಕೆ ನೀಡಲಾಗಿದೆ.

LEAVE A REPLY

Please enter your comment!
Please enter your name here