ಮಾ.6ರಂದು ಹುಣ್ಣಿಮೆ 2ನೇ ಮಖೆಕೂಟ

0


ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ನಡೆಯುತ್ತಿದ್ದು, ಹುಣ್ಣಿಮೆ ಎರಡನೇ ಮಖೆಕೂಟವು ಮಾ.6ರಂದು ನಡೆಯಲಿದೆ.


ರಾತ್ರಿ ೮:೩೦ರಿಂದ ಬಲಿ ಹೊರಟು ಉತ್ಸವ- ರಥೋತ್ಸವ, ಬಲಿ, ಮಹಾಪೂಜೆ ನಡೆಯಲಿದ್ದು, ಮಾ.೭ರಂದು ಪ್ರಾತಃಕಾಲ ತೀರ್ಥಸ್ನಾನ, ಬೆಳಗ್ಗೆ ೭:೩೦ರಿಂದ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೭:೩೦ರಿಂದ ಉತ್ಸವ ನಡೆಯಲಿದೆ. ಮಾ.೮ರಿಂದ ಬೆಳಗ್ಗೆ ಉತ್ಸವ, ಸಂಜೆ ೭:೩೦ರಿಂದ ಉತ್ಸವ ನಡೆಯಲಿದೆ. ಮಾ.೯ರಂದು ಬೆಳಗ್ಗೆ ಉತ್ಸವ, ಸಂಜೆ ೭:೩೦ರಿಂದ ಉತ್ಸವ ನಡೆಯಲಿದ್ದು, ಮಾ.೧೦ರಂದು ಸಂಜೆ ೭ರಿಂದ ದೇವರು ಬಲಿ ಹೊರಟು ರಥಬೀದಿಯಿಂದ ಹಳೆ ಬಸ್‌ನಿಲ್ದಾಣದವರೆಗೆ ಹೋಗಿ ಕಟ್ಟೆಪೂಜೆಯಾಗಿ ಸರಕಾರಿ ಪ್ರಾಥಮಿಕ ಶಾಲಾ ಮಾರ್ಗವಾಗಿ ಬಂದು ಸಂಗಮದಲ್ಲಿ ಅವಭೃತ ಸ್ನಾನ ಮತ್ತು ಉದ್ಭವಲಿಂಗದ ಬಳಿ ರಂಗಪೂಜೆ, ಧ್ವಜಾವರೋಹಣ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.೬ರಂದು ರಾತ್ರಿ ಟೀಂ ದಕ್ಷಿಣ ಕಾಶಿಯವರಿಂದ ಉಬಾರ್ ಉತ್ಸವ ನಡೆಯಲಿದ್ದು, ರಾತ್ರಿ ೧೨ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅತಿಕಾಯ- ಇಂದ್ರಜಿತು' ಯಕ್ಷಗಾನ ಬಯಲಾಟ ನಡೆಯಲಿದೆ. ಮಾ.7ರಂದು ಸಂಜೆ 6.3೦ರಿಂದ ಪುತ್ತೂರಿನ ನೃತ್ಯೋಪಸನಾ ಕಲಾಕೇಂದ್ರದವರಿಂದನೃತ್ಯೋಹಂ’, ರಾತ್ರಿ ೮:೩೦ರಿಂದ ಎಸ್.ಕೆ. ಧರಣ್ ಮತ್ತು ಬಳಗದವರಿಂದ ಹರಿನಾದ ಸಂಕೀರ್ತನಾ ನಡೆಯಲಿದೆ. ಮಾ.೮ರಂದು ಸಂಜೆ ೬:೩೦ರಿಂದ ಗಡಿನಾಡ ಕನ್ನಡ ಮತ್ತು ಸಾಂಸ್ಕೃತಿಕ ತಂಡದಿಂದ ಸಾಹಿತ್ಯ- ಗಾನ- ನೃತ್ಯ ವೈಭವ', ರಾತ್ರಿ ೯ರಿಂದ ಬಾಲವನದ ಮಹಿಳಾ ಯಕ್ಷತಂಡದಿಂದಶ್ರೀ ದೇವಿ ಲೀಲಾಮೃತ’ ಯಕ್ಷಗಾನ ಬಯಲಾಟ ನಡೆಯಲಿದೆ.


ಮಾ.೯ರಂದು ಸಂಜೆ ೬:೩೦ರಿಂದ ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ಗಾನಾಮೃತ ಮಂಜರಿ', ರಾತ್ರಿ ೮:೩೦ರಿಂದ ವಿಜಯಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದಶಿವಧೂತೆ ಗುಳಿಗೆ’ ತುಳು ಭಕ್ತಿ ಪ್ರಧಾನ ನಾಟಕ ನಡೆಯಲಿದೆ. ಮಾ.೧೦ರಂದು ಸಂಜೆ ೬:೩೦ರಿಂದ ಉಪ್ಪಿನಂಗಡಿ ಹಳೆ ಬಸ್‌ನಿಲ್ದಾಣದ ವಠಾರದಲ್ಲಿ ಗೆಳೆಯರು- ೯೪ ಅರ್ಪಿಸುವ ಅನುಗ್ರಹ ಮೆಲೋಡಿಸ್ ಮಂಗಳೂರು ಇವರಿಂದ `ಸಂಗೀತ- ಗಾನ- ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here