ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ಮಾಸಿಕ ಸಭೆಯು ಮಾ.೫ ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಅಧ್ಯಕ್ಷತೆ ವಹಿಸಿ ಸಭಾ ನಡಾವಳಿ ನಡೆಸಿದರು.
ಸಂಘದ ಖಜಾಂಜಿ ಲಿಂಗಪ್ಪ ಗೌಡ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಸುರೇಶ್ ಕಲ್ಲಾರೆ ವರದಿ ವಾಚಿಸಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮುಂದಿನ ಕಾರ್ಯಯೋಜನೆ ಕುರಿತು ಮಾಹಿತಿ ನೀಡಿದರು. ಸಮುದಾಯ ಭವನದ ಉಸ್ತುವಾರಿ ಸಮಿತಿ ಅಧ್ಯಕ್ಷ ದಯಾನಂದ ಕೆ.ಎಸ್ ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ಚಿಕ್ಕಮುಡ್ನೂರಿನ ಲೀಲಾವತಿ ಮತ್ತು ಕೆಮ್ಮಿಂಜೆ ಗ್ರಾಮದ ರೇವತಿ ಅವರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲಾಯಿತು.
ಮುರ ಗೌಡ ಸಮುದಾಯದ ಭವನದ ಮೇಲಂತಸ್ತಿನ ಕಟ್ಟಡ ಲೋಕಾರ್ಪಣೆ:
ಗ್ರಾಮೀಣ ಒಕ್ಕಲಿಗ ಗೌಡ ಸೇವಾ ಸಂಘದ ಮುರ ಗೌಡ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡದ ಲೋಕಾರ್ಪಣೆ ಮಾ.೨೬ ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಮುದಾಯದವರೆಲ್ಲರು ಭಾಗವಹಿಸುವಂತೆ ಕಟ್ಟಡ ಸಮಿತಿ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ ವಿನಂತಿಸಿದರು. ಮುರ ಗೌಡ ಸಂಘದ ಜಿನ್ನಪ್ಪ ಗೌಡ, ಬಾಬು ಗೌಡ, ನಾರಾಯಣ ಗೌಡ, ಗೋವರ್ಧನ್ ಕಲ್ಲೇಗ ಸಹಿತ ಹಲವಾರು ಮಂದಿ ಈ ಸಂದರ್ಭದಲ್ಲಿ ಗೌಡ ಸಂಘಕ್ಕೆ ಆಮಂತ್ರಣ ನೀಡಿದರು. ಮಹಿಳಾ ಗೌಡ ಸಂಘದ ಅಧ್ಯಕ್ಷ ಮೀನಾಕ್ಷಿ ಡಿ ಗೌಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಸಮುದಾಯನದಲ್ಲಿ ಹಲವಾರು ಸಮಯ ಸೇವೆಯನ್ನು ನೀಡುತ್ತಿದ್ದ ಮೋನಪ್ಪ ಗೌಡ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಭೆಯಲ್ಲಿ ಮಾಡಲಾಯಿತು.