ಪುತ್ತೂರು: ಸವಣೂರು ಗ್ರಾಮದ ಇಪ್ಪರಮಜಲು ಮಾರಿಯಮ್ಮ, ಪಂಜುರ್ಲಿ, ಗುಳಿಗ, ಕಲ್ಲುರ್ಟಿ ಸಹಿತ ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ತಾಂಬೂಲ ಪ್ರಶ್ನಾ ಚಿಂತನೆ ನಡೆಯಿತು.
ಜ್ಯೋತಿಷಿ ವಿಶ್ವಮೂರ್ತಿ ಬಡೆಕಿಲ್ಲಾಯರವರು ತಾಂಬೂಲ ಪ್ರಶ್ನಾ ಚಿಂತನೆಯನ್ನು ನಡೆಸಿಕೊಟ್ಟರು. ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಪ್ರಜ್ವಲ್ ಕೆ.ಆರ್.ಕೋಡಿಬೈಲು, ಶ್ರೀಧರ್ ಸುಣ್ಣಾಜೆ, ಗಂಗಾಧರ್ ಸುಣ್ಣಾಜೆ, ಚೇತನ್ ಕುಮಾರ್ ಕೋಡಿಬೈಲು, ಕಾರ್ತಿಕ್ ಮಜಲುಮಾರು, ಸತೀಶ್ ಅಂಗಡಿಮೂಲೆ, ಸುರೇಶ್ ಪೆರುವಾಜೆ, ನವೀನ್ ನಿಂತಿಕಲ್ಲು, ಜಗನ್ನಾಥ ಅಟ್ಟೋಳೆ, ಪಕೀರ, ಚೋಮ ಬಸ್ತಿ, ಕುಜುಂಬ, ಕೃಷ್ಣಪ್ಪ ಕೆರೆತಕೊಚ್ಚಿ, ಗುರ್ಬಿ, ಶೀನ, ಬಾಗಿ, ಮೊಂಟ, ಜಯಂತಿ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.
49 ಕುಟುಂಬಗಳ ಆರಾಧನೆಯ ದೈವಸ್ಥಾನ: ಸುಮಾರು 49 ಕುಟುಂಬಗಳು ಆರಾಧನೆಯನ್ನು ಮಾಡುವ ದೈವಸ್ಥಾನವಾಗಿರುವ ಸವಣೂರು ಇಪ್ಪರಮಜಲು ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ, ಪೂಜಾ ವಿಧಿವಿಧಾನಗಳನ್ನು ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯರವರು ನೆರವೇರಿಸಿದರು.