ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಉರೂಸ್ ಸಮಾರೋಪ-ಅನ್ನದಾನ
ಮತ ಪ್ರಭಾಷಣ, ಮದನಿಯಂ ಆತ್ಮೀಯ ಮಜ್ಲಿಸ್, ಬುರ್ದಾ ಆಲಾಪನೆ

0

ಪುತ್ತೂರು: ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಉರೂಸ್ ಪ್ರಯುಕ್ತ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ ಮಾ.2, 3 ಮತ್ತು ಮಾ.4ರಂದು ನಡೆಯಿತು. ಹಾಫಿಳ್ ಅಸ್ಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು.

ಮಾ.4ರಂದು ನಡೆದ ಉರೂಸ್ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿದ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಮಾತನಾಡಿ ಅಲ್ಲಾಹನ ಇಷ್ಟದಾಸರ ಹೆಸರಿನಲ್ಲಿ ಆಚರಿಸುವ ಉರೂಸ್ ಕಾರ್ಯಕ್ರಮಗಳಿಗೆ ವಿಶೇಷ ಮಹತ್ವ ಮತ್ತು ಪ್ರಾಧಾನ್ಯತೆಯಿದೆ. ದರ್ಗಾ ಝಿಯಾರತ್ ಮಾಡುವುದು, ಪ್ರಾರ್ಥಿಸುವುದು ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು.

ದುವಾಶೀರ್ವಚನ ನೀಡಿದ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ಮಾತನಾಡಿ ಇಸ್ಲಾಂ ಧರ್ಮ ಆಜ್ಞಾಪಿಸಿದ ಹಾದಿಯಲ್ಲಿ ಜೀವನ ನಡೆಸಲು ಪ್ರತಿಯೋರ್ವರೂ ಪ್ರಯತ್ನಿಸಬೇಕು ಎಂದು ಹೇಳಿದರು.

ಯಾಸೀನ್ ಜೌಹರಿ ಅಲ್ ಮದನಿ ಕೊಲ್ಲಂ ಮುಖ್ಯ ಪ್ರಭಾಷಣ ನಡೆಸಿದರು.

ಪುಣಚ ಮಸೀದಿಯ ಖತೀಬ್ ಬಿ.ಎಂ ಮಹಮ್ಮದ್ ದಾರಿಮಿ ಮಾತನಾಡಿದರು. ಕೈಕಂಬ ಮರ್ಕಝ್ ಸಂಸ್ಥೆಯ ಪ್ರಾಂಶುಪಾಲ ಬದ್ರುದ್ದೀನ್ ಅಝ್ಹರಿ ಕೈಕಂಬ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪರಿಯಲ್ತಡ್ಕ ಮಸೀದಿ ಅಧ್ಯಕ್ಷ ಎಂ.ಎಸ್ ಮುಹಮ್ಮದ್, ಬಿ.ಎಸ್ ಇಸ್ಮಾಯಿಲ್ ಹಾಜಿ ದೇರಳಕಟ್ಟೆ, ಲತೀಫ್ ಗುರುಪುರ, ಉರೂಸ್ ಕಮಿಟಿ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಕೆಎಂಜೆ ಕೋಶಾಧಿಕಾರಿ ಯೂಸುಫ್ ಹಾಜಿ ಕೈಕಾರ, ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಉಸ್ಮಾನ್ ಹಾಜಿ ಚೆನ್ನಾರ್, ಸಯ್ಯದ್ ಸಾದಾತ್ ತಂಙಳ್ ಕರ್ವೇಲ್, ಇಬ್ರಾಹಿಂ ಸಅದಿ, ಅಬ್ಬಾಸ್ ಸಅದಿ, ಅಬ್ದುರ್ರಝಾಕ್ ಖಾಸಿಮಿ ಅಬೂಶಝ, ಸುಲೈಮಾನ್ ಸಅದಿ, ಸಿದ್ದೀಕ್ ಫೈಝಿ ಮೊಟ್ಟೆತ್ತಡ್ಕ, ಇಬ್ರಾಹಿಂ ಸಖಾಫಿ ಕಬಕ, ಫಾರೂಕ್ ಹನೀಫಿ, ನಗರಸಭೆ ಮಾಜಿ ಸದಸ್ಯ ಎಚ್.ಮಹಮ್ಮದ್ ಆಲಿ, ಕುಂಬ್ರ ಮರ್ಕಝುಲ್ ಹುದಾ ಕಾರ್ಯದರ್ಶಿ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ, ಖಲಂದರ್ ಕಬಕ, ಕೆ.ಎಂ ಹನೀಫ್ ಮಾಡಾವು, ಆಶಿಕುದ್ದೀನ್ ಅಖ್ತರ್ ಕುಂಬ್ರ, ಅಬೂಬಕ್ಕರ್ ಆರ್ಲಪದವು, ಇದ್ದುಕುಂಞಿ ಸಾಜ, ಮಹಮ್ಮದ್ ಹಾಜಿ ನೆಕ್ಕಿಲಾಡಿ, ಇಸ್ಮಾಯಿಲ್ ಹಾಜಿ ಬನ್ನೂರು ಸ್ವಾಲಿಹ್ ಮುರ, ಇಕ್ಬಾಲ್ ಬಪ್ಪಳಿಗೆ ಉಪಸ್ಥಿತರಿದ್ದರು.
ಮಂಜ ಮುಹ್ಯಿಸ್ಸುನ್ನ ದರ್ಸ್‌ನ ಪ್ರಾಂಶುಪಾಲ ಹಾಫಿಳ್ ಶರೀಫ್ ಸಖಾಫಿ ಕಾಮಿಲ್ ಅಲ್ ಹಿಕಮಿ ಸ್ವಾಗತಿಸಿದರು.

ಹಣ್ಣು ಹಂಪಲು ವಿತರಣೆ:
ದಅವಾ ವಿಂಗ್ ಪುತ್ತೂರು ವತಿಯಿಂದ ಹಣ್ಣು ಹಂಪಲು ವಿತರಣೆ ನಡೆಯಿತು.

ದರ್ಗಾ ಝಿಯಾರತ್:
ಮೂರು ದಿನಗಳ ಕಾರ್ಯಕ್ರಮ ದಿನದಂದು ಸಾವಿರಾರು ಮಂದಿ ಆಗಮಿಸಿ ದರ್ಗಾ ಝಿಯಾರತ್ ನಡೆಸಿದರು. ಇತರ ಧರ್ಮೀಯರೂ ಸಾಕಷ್ಟು ಸಂಖ್ಯೆಯಲ್ಲಿ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡು ಬಂತು.

ಅನ್ನದಾನ:
ಉರೂಸ್ ಕೊನೆಯಲ್ಲಿ ಅನ್ನದಾನ ನಡೆಯಿತು. ಜಾತಿ, ಮತ ಬೇಧವಿಲ್ಲದೇ ಸಾವಿರಾರು ಮಂದಿ ಆಗಮಿಸಿ ಅನ್ನದಾನ ಸ್ವೀಕರಿಸಿದರು. ಉರೂಸ್‌ಗೆ ಆಗಮಿಸಿದವರಿಗೆ ವಿಶೇಷವಾಗಿ ಬೆಲ್ಲದ ಗಂಜಿ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಮದನಿಯಂ ಆತ್ಮೀಯ ಮಜ್ಲಿಸ್:
ಉರೂಸ್ ಕಾರ್ಯಕ್ರಮದ 2ನೇ ದಿನವಾದ ಮಾ.3ರಂದು ಅಬ್ದುಲ್ ಲತೀಫ್ ಸಖಾಫಿ ನೇತೃತ್ವದಲ್ಲಿ ಮದನಿಯಂ ಆತ್ಮೀಯ ಮಜ್ಲಿಸ್ ನಡೆಯಿತು. ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮಾತನಾಡಿ ಪ್ರವಾದಿ ಮೇಲಿನ ಸ್ವಲಾತ್‌ನ್ನು ದಿನ ನಿತ್ಯ ಹೇಳುವುದರಿಂದ ಜೀವನದಲ್ಲಿ ನೆಮ್ಮದಿ ಕಾಣಬಹುದಾಗಿದೆ ಎಂದು ಹೇಳಿದರು.

ಮಂಜ ಮುಹ್ಯಿಸ್ಸುನ್ನ ದರ್ಸ್ ಮುದರ್ರಿಸ್ ಮುಹಮ್ಮದ್ ಝಾಹಿದ್ ಫಾಳಿಲಿ ಉದ್ಘಾಟಿಸಿದರು. ಸಫ್ವಾನ್ ಜೌಹರಿ ಸ್ವಾಗತಿಸಿದರು. ಜುಮಾ ನಮಾಜಿನ ಬಳಿಕ ಮಖಾಂ ಝಿಯಾರತ್ ಹಾಗೂ ಚಾದರ ಹೊದಿಕೆ ಕಾರ್ಯಕ್ರಮ ನಡೆಯಿತು. ಇಬ್ರಾಹಿಂ ಮದನಿ ಬೀಟಿಗೆ ದುವಾ ಮಾಡಿದರು.ಅಶ್ರಫ್ ಸಖಾಫಿ ಅಲ್ ಮಳ್‌ಹರಿ, ಅಬ್ದುಲ್ ಲತೀಫ್ ಹನೀಫಿ ಉಪಸ್ಥಿತರಿದ್ದರು.

ಉರೂಸ್ ಉದ್ಘಾಟನೆ-ಧ್ವಜಾರೋಹಣ:
ಮಾ.2ರಂದು ಉರೂಸ್ ಕಾರ್ಯಕ್ರಮ ಉದ್ಘಾಟನೆಗೊಂಡಿತು.ಬೆಳಿಗ್ಗೆ ಮುಹಮ್ಮದ್ ಝಾಹಿದ್ ಫಾಳಿಲಿ ಹಾಗೂ ಅಬ್ದುಲ್ ಲತೀಫ್ ಹನೀಫಿ ಅಶ್‌ಅರಿ ನೇತೃತ್ವದಲ್ಲಿ ಖತ್‌ಮುಲ್ ಖುರ್‌ಆನ್ ನಡೆಯಿತು. ನಂತರ ಮಂಜ ಅನ್ಸಾರಿಯಾ ಜಮಾಅತ್ ಕಮಿಟಿ ಅಧ್ಯಕ್ಷ ಉಮ್ಮರ್ ಫಾರೂಕ್ ಅವರು ಧ್ವಜಾರೋಹಣ ನೆರವೇರಿಸಿದರು.
ಸಂಜೆ ಮಹಮೂದುಲ್ ಫೈಝಿ ಓಲೆಮುಂಡೋವು ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಿತು. ಮಗ್ರಿಬ್ ನಮಾಜಿನ ಬಳಿಕ ಮಂಜ ಮುಹ್ಯಿಸ್ಸುನ್ನ ದರ್ಸ್ ವಿದ್ಯಾರ್ಥಿಗಳಿಂದ ಬುರ್ದಾ ಆಲಾಪನೆ ಹಾಗೂ ಮತ ಪ್ರಭಾಷನ ನಡೆಯಿತು. ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ದುವಾಶೀರ್ವಚನ ನೀಡಿದರು. ಹಸೈನಾರ್ ಫೈಝಿ ಪರಿಯಲ್ತಡ್ಕ ಉದ್ಘಾಟಿಸಿದರು.

ಸಫ್ವಾನ್ ಜೌಹರಿ, ಮಹಮ್ಮದ್ ಝಾಹಿದ್ ಫಾಳಿಲಿ, ಅಬ್ದುಲ್ಲ ಸಖಾಫಿ ಬೈತಡ್ಕ, ಮಹಮ್ಮದ್ ಹಾಜಿ ಕೋಡಿಯಡ್ಕ, ಅಶ್ರಫ್ ಪೈಸಾರಿ, ರಿಯಾಝ್ ಎ.ಕೆ, ಅನಸ್ ಬಿ.ಕೆ, ಅಬ್ದುಲ್ಲ ಕುಂಞಿ ಸಾರ್ಯ, ಎ.ಕೆ ಹಮೀದ್ ಸಾಜ ಉಪಸ್ಥಿತರಿದ್ದರು. ಅಬ್ದುಲ್ ಲತೀಫ್ ಹನೀಫಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here