ನೆಲ್ಯಾಡಿ: ಸೀಗಲ್ ಟ್ರೇಡರ್‍ಸ್, 4 ಮಾರ್ಕ್ ಫರ್ನಿಚರ್, ಸ್ಟ್ರಾಬೆರಿ ಕಿಡ್ಸ್ ವೇರ್, ಎಬಿಸಿ ಬೇಕರಿ, ಸನ್‌ಸಾರ್ ಕಿಚನ್‌ವೇರ್ ಶುಭಾರಂಭ

0

ನೆಲ್ಯಾಡಿ: ದಿನಸಿ ಸಾಮಾಗ್ರಿಗಳ ಮಾರಾಟ ಮಳಿಗೆ ಸೀಗಲ್ ಟ್ರೇಡರ್‍ಸ್, ಫರ್ನಿಚರ್‌ಗಳ ಬೃಹತ್ ಸಂಗ್ರಹ ಮಳಿಗೆ 4 ಮಾರ್ಕ್ ಫರ್ನಿಚರ್, ಮಕ್ಕಳ ರೆಡಿಮೆಡ್ ಬಟ್ಟೆಗಳ ಮಳಿಗೆ ಸ್ಟ್ರಾಬೆರಿ ಕಿಡ್ಸ್, ಎಬಿಸಿ ಬೇಕರಿ ಮತ್ತು ಐಸ್‌ಕ್ರೀಮ್ ಪಾರ್ಲರ್ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಸನ್‌ಸಾರ್ ಕಿಚನ್‌ವೇರ್ ಮಾ.6ರಂದು ನೆಲ್ಯಾಡಿಯ ಡಿಯೋನ್ ಸ್ಕ್ವೇರ್ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.


ಸೀಗಲ್ ಗ್ರೂಪ್‌ನ ಸಮೂಹ ಸಂಸ್ಥೆಗಳಾದ ಸೀಗಲ್ ಟ್ರೇಡರ್‍ಸ್, 4 ಮಾರ್ಕ್ ಫರ್ನಿಚರ್, ಸ್ಟ್ರಾಬೆರಿ ಕಿಡ್ಸ್ ಹಾಗೂ ಎಬಿಸಿ ಬೇಕರಿ ನೆಲ್ಯಾಡಿ ಪೇಟೆಯಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನಮೆಚ್ಚುಗೆ ಗಳಿಸಿದ್ದವು. ಇದೀಗ ಈ ಎಲ್ಲಾ ಮಳಿಗೆಗಳು ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಇತ್ತೀಚೆಗೆ ಉದ್ಘಾಟನೆಗೊಂಡಿರುವ ಸುಸಜ್ಜಿತ ವಾಣಿಜ್ಯ ಸಂಕೀರ್ಣ ಡಿಯೋನ್ ಸ್ಕ್ವೇರ್‌ಗೆ ಸ್ಥಳಾಂತರಗೊಂಡಿವೆ. ಎಲ್ಲಾ ಮಳಿಗೆಗಳೂ ವಿಶಾಲವಾದ ಜಾಗ ಹೊಂದಿದ್ದು ಇದರಿಂದ ಗ್ರಾಹಕರಿಗೆ ಇನ್ನಷ್ಟೂ ಉತ್ತಮ ಸೇವೆ ಸಿಗಲಿದೆ. ಅಲ್ಲದೇ ಗ್ರಾಹಕರಿಗೆ ದಿನನಿತ್ಯದ ಅಗತ್ಯ ಸಾಮಾಗ್ರಿಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ.


ಸನ್‌ಸಾರ್ ಕಿಚನ್‌ವೇರ್ ಶುಭಾರಂಭ:

ಸೀಗಲ್ ಗ್ರೂಪ್‌ನ ಹೊಸ ಸಂಸ್ಥೆ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಸನ್‌ಸಾರ್ ಕಿಚನ್‌ವೇರ್ ಡಿಯೋನ್ ಸ್ಕ್ವೇರ್‌ನಲ್ಲಿ ಶುಭಾರಂಭಗೊಂಡಿತು. ಕುಕ್ಕರ್, ಮಿಕ್ಸಿ, ಸ್ಟೀಲ್ ಹಾಗೂ ಅಲ್ಯುಮಿನಿಯಂ ಪಾತ್ರೆಗಳು ಸೇರಿದಂತೆ ದಿನಬಳಕೆಯ ಗೃಹೋಪಯೋಗಿ ಸಾಮಾಗ್ರಿಗಳು ಈ ಮಳಿಗೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಸುಸಜ್ಜಿತ ಪಾರ್ಕಿಂಗ್ ಸೌಲಭ್ಯ, ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅವಶ್ಯಕ ಮೂಲಭೂತ ಸೌಲಭ್ಯ ಹೊಂದಿರುವ ಡಿಯೋನ್ ಸ್ಕ್ವೇರ್ ವಾಣಿಜ್ಯ ಸಂಕೀರ್ಣದ ಒಂದೇ ಮಳಿಗೆಯಲ್ಲಿ ಇನ್ನು ಮುಂದೆ ಗ್ರಾಹಕರಿಗೆ ಎಲ್ಲಾ ವಸ್ತುಗಳನ್ನು ಕೊಂಡುಕೊಳ್ಳುವ ಸದಾವಕಾಶ ಸಿಗಲಿದೆ. ನೂತನ ಮಾರಾಟ ಮಳಿಗೆಗಳನ್ನು 4 ಮಾರ್ಕ್ ಫರ್ನಿಚರ್‌ನ ಪಾಲುದಾರರೂ ಆಗಿರುವ ಉಮ್ಮರ್ ಫಾರೂಕ್ ಸುಲ್ತಾನ್ ಕೊಡಾಜೆ ಅವರು ಉದ್ಘಾಟಿಸಿದರು.

ಸಯ್ಯದ್ ಝೈನುಲ್ ಅಬೀದಿನ್ ಜಮಾಲುಲ್ ಲೈಲಿ ತಂಙಳ್ ಕಾಜೂರು, ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಖತೀಬರಾದ ಶೌಕತ್ ಆಲಿ ಆಮಾನಿ, ನೆಟ್ಟಣ ಹಾಗೂ ಗುತ್ತಿಗಾರು ಚರ್ಚ್‌ನ ಧರ್ಮಗುರು ರೆ.ಫಾ.ಆದರ್ಶ ಜೋಸೆಫ್, ನೆಲ್ಯಾಡಿ ಸುಬ್ರಹ್ಮಣ್ಯ ವಿಲಾಸ ಹೋಟೆಲ್‌ನ ಮಾಲಕ ಸುಬ್ರಹ್ಮಣ್ಯ ಆಚಾರ್, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ಟಿ.ಕೆ.ಶಿವದಾಸನ್, ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಟೋಪ್ರೋ ಜ್ಯುವೆಲ್ಲರಿಯ ಅಝೀಝ್ ಹಾಜಿ ಕಣ್ಣೂರು, ನಝೀರ್ ಕಣ್ಣೂರು, ಮುನೀರ್ ಮಟ್ಟನ್ನೂರು, ಮಹಮ್ಮದ್ ಪುತ್ತೂರು-ವಿಟ್ಲ, ಅಸ್ಲಾಂ ಕುಶಾಲನಗರ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್, ಎಲೈಟ್ ರಬ್ಬರ್ ಕಂಪನಿಯ ಶಾಜಿ ವರ್ಗೀಸ್, ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಒ.ಜೆ.ನೈನಾನ್, ಡಿಯೋನ್ ಸ್ಕ್ವೇರ್ ಕಟ್ಟಡ ಮಾಲಕ ಎ.ಕೆ.ವರ್ಗೀಸ್, ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ ದೋಂತಿಲ, 4 ಮಾರ್ಕ್ ಫರ್ನಿಚರ್‌ನ ಅಬ್ದುಲ್ ರಹಿಮಾನ್ ಸುಲ್ತಾನ್, ಮಹಮ್ಮದ್ ರಫೀಕ್ ಸುಲ್ತಾನ್, ಯಾಹ್ಯಾ ಸುಲ್ತಾನ್, ಇಬ್ರಾಹಿಂ ಬಾತಿಷ ಸುಲ್ತಾನ್, ವಹಾಬ್ ಬಂಟ್ವಾಳ, ಸಿದ್ದೀಕ್ ಕುಂಬ್ರ, ಶಮೀರ್ ಶಾಂತಿನಗರ, ನವಾಝ್ ನೇರಳಕಟ್ಟೆ, ನವಾಝ್ ಇಂಜಿನಿಯರ್ ನೇರಳಕಟ್ಟೆ, ಉಬೈದ್ ಬಂಟ್ವಾಳ, ನೆಲ್ಯಾಡಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಆನಂದ ಪಿಲವೂರು, ಮಹಮ್ಮದ್ ಇಕ್ಬಾಲ್, ಯಾಕೂಬ್ ಯಾನೆ ಸಲಾಂ, ಉಷಾ ಜೋಯಿ, ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಉದಯಕುಮಾರ್ ದೋಂತಿಲ, ಲೋಕೇಶ್ ಬಾಣಜಾಲು, ಕೆ.ಎಂ.ಹನೀಫ್, ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ಉದ್ಯಮಿಗಳಾದ ಕೆ.ಪಿ.ತೋಮಸ್, ಸತೀಶ್ ಕೆ.ಎಸ್.ದುರ್ಗಾಶ್ರೀ, ಭಾರತ್ ಟ್ರೇಡರ್‍ಸ್‌ನ ಹನೀಫ್, ನಾಝೀಂ ಸಾಹೇಬ್, ಕುಶಾಲಪ್ಪ ಕೋಟ್ಯಾನ್, ಸಂತೋಷ್‌ಕುಮಾರ್ ಜೈನ್ ಆಯಿಲ್, ಚರಣ್ ಪೂವಾಜೆ ಸೇರಿದಂತೆ ನೆಲ್ಯಾಡಿಯ ಉದ್ಯಮಿಗಳು, ವಿವಿಧ ಸಂಘಸಂಸ್ಥೆಗಳ ಮುಖಂಡರು ಸೇರಿದಂತೆ ನೂರಾರು ಮಂದಿ ಭೇಟಿ ನೀಡಿ ಶುಭಹಾರೈಸಿದರು. ಸಂಸ್ಥೆಯ ಪಾಲುದಾರರಾದ ರಫೀಕ್ ಸೀಗಲ್, ನಝೀರ್ ಸೀಗಲ್, ಎಬಿಸಿ ಬೇಕರಿಯ ಝುಹೈದ್, ಝುಹೈಸ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

ನೆಲ್ಯಾಡಿಯಲ್ಲಿ ಕಳೆದ ಹಲವು ವರ್ಷಗಳಿಂದ ನಮ್ಮ ವ್ಯಾಪಾರಕ್ಕೆ ಗ್ರಾಹಕರು ಸಹಕಾರ ನೀಡಿ ಬೆಳೆಸಿದ್ದಾರೆ. ಗ್ರಾಹಕರಿಗೆ ಇನ್ನಷ್ಟೂ ಉತ್ತಮ ಸೇವೆ ನೀಡುವ ಸದುzಶದಿಂದ ನಮ್ಮ ಎಲ್ಲಾ ಸಂಸ್ಥೆಗಳನ್ನು ಸುಸಜ್ಜಿತ ಸೌಕರ್ಯ ಹೊಂದಿರುವ ಡಿಯೋನ್ ಸ್ಕ್ವೇರ್ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಿಸಿದ್ದೆವೆ. ಇದರಿಂದ ಗ್ರಾಹಕರಿಗೆ ಎಲ್ಲಾ ಅಗತ್ಯವಸ್ತುಗಳು ಒಂದೇ ಮಳಿಗೆಯಲ್ಲಿ ಸಿಗಲಿದೆ. ಗ್ರಾಹಕರು ನಮ್ಮನ್ನು ಆಶೀರ್ವದಿಸಿ ಮುಂದೆಯೂ ಸಹಕಾರ ನೀಡುವಂತೆ ಕೋರುತ್ತೇವೆ.
ರಫೀಕ್ ಸೀಗಲ್, ಪಾಲುದಾರರು, ಅಧ್ಯಕ್ಷರು, ವರ್ತಕರ ಸಂಘ ನೆಲ್ಯಾಡಿ

LEAVE A REPLY

Please enter your comment!
Please enter your name here