ಪೆರ್ನಾಜೆ:ಹಿಟ್ ಆಂಡ್ ರನ್ ಪ್ರಕರಣ ದಾಖಲು

0

ಪುತ್ತೂರು:ವಾರದ ಹಿಂದೆ ಪೆರ್ನಾಜೆ ಸಮೀಪ ಸ್ಕೂಟರೊಂದಕ್ಕೆ ಬೆಂಝ್ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಸ್ಕೂಟರ್ ಸವಾರ ಇದೀಗ ಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಕೊಳ್ತಿಗೆ ಗ್ರಾಮದ ಕಂಟ್ರಮಜಲು ಪೂಂದ್ರುಕೋಡಿ ಗಂಗಾಧರ ಗೌಡ ಮತ್ತು ಅವರ ಪತ್ನಿ ಹೇಮಲತಾರವರು ಸುಳ್ಯಕ್ಕೆ ವಿವಾಹ ಸಂಬಂಧ ಕಾರ್ಯಕ್ರಮಕ್ಕೆ ಹೋಗಿ ಹಿಂತಿರುಗಿ ಬರುತ್ತಿದ್ದ ವೇಳೆ ಪೆರ್ನಾಜೆ ಸಮೀಪ ಕಂಟ್ರಮಜಲುಗೆ ಸಮೀಪ ಹಿಂದಿನಿಂದ ಬರುತ್ತಿದ್ದ ಬೆಂಝ್ ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿತ್ತು.ಇದರಿಂದಾಗಿ ಸ್ಕೂಟರ್ ಸವಾರ ದಂಪತಿ ರಸ್ತೆಗೆಸೆಯಲ್ಪಟ್ಟಿದ್ದರು.ಗಂಗಾಧರ ಗೌಡರು ತೀವ್ರ ಗಾಯಗೊಂಡು ಕೋಮಾಸ್ಥಿತಿ ತಲುಪಿದ್ದರು.

ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇದೀಗ ತುಸು ಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.ಅಪಘಾತವೆಸಗಿದ ಕಾರು ಸ್ಥಳದಿಂದ ಪರಾರಿಯಾಗಿದ್ದು ಬಳಿಕ ಸಿಸಿ ಕ್ಯಾಮರಾ ಆಧಾರದಲ್ಲಿ ಅದನ್ನು ಪತ್ತೆ ಮಾಡಲಾಗಿದ್ದು ಕಾರು ವಕೀಲರೋರ್ವರಿಗೆ ಸೇರಿದ್ದೆನ್ನಲಾಗಿದೆ. ಪ್ರಕರಣದ ಕುರಿತು ಗಂಗಾಧರ ಗೌಡರ ಮಗ ವಿನುತ್ ಪಿ.ಜಿ. ನೀಡಿದ ದೂರಿನ ಮೇರೆಗೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here