ಕಳೆದ ಚುನಾವಣೆಯಲ್ಲಿ ಅತೀ ಕಡಿಮೆ ಮತದಾನವಾದ ಬೂತ್‌ನಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ನಗರಸಭೆಯಿಂದ ವ್ಯಾಪಕ ಜಾಗೃತಿ

0

ಪುತ್ತೂರು: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಬಗ್ಗೆ ಮತದಾರರಲ್ಲಿರುವ ಅನುಮಾನ ಹೋಗಲಾಡಿಸುವ ಉದ್ದೇಶದಿಂದ ಅವುಗಳ ಜತೆಗೆ ಮತ ಖಾತರಿ ಯಂತ್ರಗಳನ್ನು (ವಿ.ವಿ ಪ್ಯಾಟ್) ಬಳಸಲು ಕೇಂದ್ರ ಚುನಾವಣಾ ಆಯೋಗ ಸೂಚನೆಯಂತೆ ಪುತ್ತೂರು ನಗರಸಭೆ ವ್ಯಾಪ್ತಿಯ ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾದ ಮೂರು ಮತಗಟ್ಟೆ ಕೇಂದ್ರಗಳಲ್ಲಿ ಅರಿವು ಕಾರ್ಯಕ್ರಮ ಮಾ.7ರಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರ ನೇತೃತ್ವದಲ್ಲಿ ನಡೆಯಿತು.


ಮತಗಟ್ಟೆ ಸಂಖ್ಯೆ 128, 129, 130 ರಲ್ಲಿ ಕೊಂಬೆಟ್ಟು ಮತ್ತು ನೆಲ್ಲಿಕಟ್ಟೆ ಶಾಲೆಯಲ್ಲಿ ಮತದಾರರಿಗೆ ಮತ ಚಲಾಯಿಸುವ ವಿಧಾನದ ಪ್ರಾತ್ಯಕ್ಷಿಕೆ ನೀಡಲಾಯಿತು. 128 ಮತಗಟ್ಟೆಯಲ್ಲಿ 996, 129ರಲ್ಲಿ 1158, 130ರಲ್ಲಿ 1285 ಮತದಾರರಿದ್ದು, ಕಳೆದ ಚುನಾವಣೆಯಲ್ಲಿ ಈ ಮೂರು ಬೂತ್‌ಗಳಲ್ಲಿ ಕಡಿಮೆ ಮತದಾನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಮತದಾರರನ್ನು ಜಾಗೃತಿಗೊಳಿಸುವ ಕಾರ್ಯಕ್ರಮ ನಡೆಸಲಾಗಿದೆ.


ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಇವಿಎಂ ನಲ್ಲಿ ಮತದಾನ ಮಾಡುವ ವಿವರಣೆ ನೀಡಿದರು. ಮತದಾರರು ಮತ ಚಲಾಯಿಸಿದ ಮತ ಪಡೆದ ಅಭ್ಯರ್ಥಿಯ ವಿವರ ವಿ.ವಿ ಪ್ಯಾಟ್ ಯಂತ್ರದ ಗಾಜಿನ ಕಿಂಡಿಯಲ್ಲಿ ಮೂಡಿರುತ್ತದೆ. ಈ ವಿವರಗಳನ್ನು ಒಳಗೊಂಡ ಚೀಟಿಯು ಪ್ರತ್ಯೇಕ ಪೆಟ್ಟಿಗೆಯಲ್ಲಿ ಬೀಳುತ್ತದೆ. ಮತಯಂತ್ರದಲ್ಲಿ ದಾಖಲಾದ ಮತ ಹಾಗೂ ವಿವಿ ಪ್ಯಾಟ್‌ನಲ್ಲಿ ನಮೂದಾದ ಮತಗಳು ಪರಸ್ಪರ ತಾಳೆ ಆಗಬೇಕು ಸೇರಿದಂತೆ ಹಲವು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here