ನೂತನ ತಹಶೀಲ್ದಾರ್ ಶಿವಶಂಕರ್ ಅಧಿಕಾರ ಸ್ವೀಕಾರ

0

ಫಲಕ ನೀಡಿ ಸುದ್ದಿಯಿಂದ ಸ್ವಾಗತ

ಪುತ್ತೂರು:ಪುತ್ತೂರಿನ ನೂತನ ತಹಶೀಲ್ದಾರ್ ಆಗಿ ರಾಯಚೂರಿನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಜಿ.ಶಿವಶಂಕರ್‌ರವರು ವರ್ಗಾವಣೆಗೊಂಡು ಮಾ.6ರಂದು ಅಧಿಕಾರ ಸ್ವೀಕರಿಸಿದ್ದಾರೆ.

ರಾಯಚೂರು ನಿವಾಸಿಯಾಗಿರುವ ಜಿ. ಶಿವಶಂಕರ್ ಕಂದಾಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ, ರಾಯಚೂರು ಮಾನ್ವಿ ತಾಲೂಕು ಕವಿತಾಳ ನಾಡಕಚೇರಿಯಲ್ಲಿ ಉಪತಹಶೀಲ್ದಾರ್ ಮತ್ತು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ರಾಯಚೂರು ಬೀಮರಾಯನಗುಡಿಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ರಾಯಚೂರು ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಭಾರತ ಚುನವಣಾ ಆಯೋಗದ ಮಾರ್ಗಸೂಚಿ ಅನ್ವಯ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು, ಸ್ಥಳ ನಿಯುಕ್ತಿಗೊಳಿಸಿ, ವರ್ಗಾಯಿಸಿ ಕಂದಾಯ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಪುತ್ತೂರಿನಲ್ಲಿ ತೆರವಾಗಿರುವ ಸ್ಥಾನಕ್ಕೆ ಈ ಹಿಂದೆ ಬೆಂಗಳೂರಿನಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯದ ಯೋಜನಾಧಿಕಾರಿಯಾಗಿದ್ದ (ತಹಶೀಲ್ದಾರ್ ಗ್ರೇಡ್ 2) ಶ್ರೀಮತಿ ರಾಗವಿ ವಿನೋದ ನಾಯಕ ಇವರನ್ನು ಪುತ್ತೂರು ಗ್ರೇಡ್ 1 ತಹಶೀಲ್ದಾರ್ ಆಗಿ ನಿಯುಕ್ತಿಗೊಳಿಸಿ ವರ್ಗಾಯಿಸಿ ಆದೇಶಿಸಿಸಲಾಗಿತ್ತು. ಆದರೆ ಇದೀಗ ರಾಗವಿ ವಿನೋದ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ ಅದರ ಬದಲಿಗೆ ಗ್ರೇಡ್ 1 ತಹಸೀಲ್ದಾರ್ ಆಗಿ ಬೀರಮರಾಯನಗುಡಿ ಎಸ್.ಎಲ್.ಎ.ಓ ಕಚೇರಿ ಕಂದಾಯ ಅಧಿಕಾರಿ (ತಹಶೀಲ್ದಾರ್ ಗ್ರೇಡ್ -2) ಜೆ.ಶಿವಶಂಕರ್ ಅವರನ್ನು ವರ್ಗಾಯಿಸಲಾಗಿದೆ.‌

ಭ್ರಷ್ಟಾಚಾರ ವಿರುದ್ಧ ಜಾಗೃತಿ ಫಲಕ ನೀಡಿ ಸುದ್ದಿಯಿಂದ ಸ್ವಾಗತ:
ನೂತನ ತಹಶೀಲ್ದಾರ್ ಜಿ.ಶಿವಶಂಕರ್‌ರವರನ್ನು ಭ್ರಷ್ಟಾಚಾರ ವಿರುದ್ಧ ಜಾಗೃತಿ ಫಲಕ ನೀಡಿ ಸುದ್ದಿಯಿಂದ ಸ್ವಾಗತಿಸಲಾಯಿತು. ವರದಿಗಾರ ಲೋಕೇಶ್ ಬನ್ನೂರು ಹಾಗೂ ಯತೀಶ್ ಉಪ್ಪಳಿಗೆ ಉಪಸ್ಥಿತರಿದ್ದರು.

ಫಲಕ ಸ್ವೀಕರಿಸಿದ ತಹಶೀಲ್ದಾರ್ ಶಿವಶಂಕರ್ ಮಾತನಾಡಿ, ಸರಕಾರಿ ಅವಶ್ಯ ಕೆಲಸ ಕಾರ್ಯಗಳಿಗೆ ಜನರು ಅಲೆದಾಡಬಾರದು. ಇದರಿಂದ ಜನರಿಗೆ ಬಹಳಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಕಡತಗಳ ಪ್ರತಿ ದಿನ ವಿಲೇವಾರಿಯಾಗಬೇಕು. ಆಗ ಜನರಿಗೆ ಉತ್ತಮ ಸೇವೆ ದೊರೆಯುತ್ತದೆ. ಜನರ ಅಲೆದಾಟ ತಪ್ಪುತ್ತದೆ. ಜನರಿಗೆ ಶೀಘ್ರ ಹಾಗೂ ಉತ್ತಮ ಸೇವೆ ನೀಡುವುದೇ ನನ್ನ ಉದ್ದೇಶ ಎಂದು ಹೇಳಿದರು.

LEAVE A REPLY

Please enter your comment!
Please enter your name here