ವಿಟ್ಲ: ಉಳ್ಳಾಲ ತಾಲೂಕಿನ ಪಂಡಿತ್ ಹೌಸ್ ಸಮೀಪದ ವಿಜೇತ ನಗರದಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಪ್ರಕರಣದ ಕಿಂಗ್ ಪಿನ್ ವಿಟ್ಲ ಮೂಲದ ಮಹಿಳೆಯೋರ್ವರ ಸಹಿತ ನಾಲ್ವರನ್ನು ಬಂಧಿಸಿದ್ದು, ಮತ್ತೋರ್ವ ಪಿಂಪ್ ತಲೆ ಮರೆಸಿಕೊಂಡಿದ್ದಾರೆ.
ಬಂಟ್ವಾಳದ ಬೋಳಂತೂರು ವಿಟ್ಲಕೋಡಿ ನಿವಾಸಿ ರುಕಿಯಾ (50 ವ.), ಉಳ್ಳಾಲ ಸುಭಾಶ್ ನಗರ, ಕಡಪರ ನಿವಾಸಿ ಅಬ್ದುಲ್ ಶಮೀರ್ (30 ವ.), ಬೆಳ್ತಂಗಡಿ ಕಾಣಿಯೂರು ನೋಂಡಿಲ್ ಕಜೆ ನಿವಾಸಿ ಅಬ್ದುಲ್ ರಝಾಕ್ ಉಸ್ಮಾನ್ (45 ವ.) ಹಾಗೂ ಉಳ್ಳಾಲ ಅಕ್ಕರೆಕೆರೆಮಿಲಾಸ್ ಪ್ಲಾಟ್ ನಿವಾಸಿ ಮುಹಮ್ಮದ್ ಇಬ್ರಾಹೀಂ(38 ವ.) ಬಂಧಿತ ಆರೋಪಿಗಳು. ಇನ್ನೋರ್ವ ಪಿಂಪ್ ಲತೀಫ್ ಎಂಬವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರುಕಿಯಾ ವಿಜೇತ ನಗರದ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನಿಟ್ಟು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ಎನ್. ನಾಯ್ಕ್ ಅವರು ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಸಂದೀಪ್ ಜಿ.ಎಸ್. ಉಪನಿರೀಕ್ಷಕರಾದ ಮಂಜುಳಾ.ಎಲ್ ನೇತೃತ್ವದಲ್ಲಿ ರಾತ್ರಿ ಅಡ್ಡೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮೂವರು ಗಿರಾಕಿಗಳನ್ನ ವಶಕ್ಕೆ ಪಡೆದ ಪೊಲೀಸರು ನಾಲ್ವರು ನೊಂದ ಯುವತಿಯರನ್ನ ರಕ್ಷಿಸಿದ್ದಾರೆ.
ಬಂಧಿತ ಆರೋಪಿಯಿಂದ 3 ದ್ವಿಚಕ್ರ ವಾಹನಗಳು, 9 ಮೊಬೈಲ್ ಫೋನ್ ಗಳು, 5,000 ನಗದು ಸೇರಿದಂತೆ ಒಟ್ಟು 1,76,580 ರೂಪಾಯಿ ಮೌಲ್ಯದ ಸೊತ್ತನ್ನ ವಶ ಪಡಿಸಲಾಗಿದೆ.ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ್ ಎನ್, ದಾಕ್ಷಾಯಿಣಿ,ಲಕ್ಷ್ಮಿ, ಎಸಿಪಿ ರೌಡಿ ನಿಗ್ರಹದಳ ಸಿಬ್ಬಂದಿ ರೆಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.