ನೆಹರುನಗರದಲ್ಲಿ ಪ್ರಿನ್ಸಸ್ ಹರ್ಬಲ್ ಬ್ಯೂಟಿಪಾರ್ಲರ್ ಶುಭಾರಂಭ

0

ಪುತ್ತೂರು: ನೆಹರುನಗರದಲ್ಲಿನ ವಿವೇಕಾನಂದ ಕಾಲೇಜು ರಸ್ತೆಯ ಮಂಗಳಾ ಕಾಂಪ್ಲೆಕ್ಸ್ ನಲ್ಲಿ ಪ್ರಿನ್ಸಸ್ ಹರ್ಬಲ್ ಬ್ಯೂಟಿಪಾರ್ಲರ್ ಸಂಸ್ಥೆಯು ಮಾ.9 ರಂದು ಶುಭಾರಂಭಗೊಂಡಿದೆ.

ತಾರುಣ್ಯ ಬ್ಯೂಟಿ ಪಾರ್ಲರ್ ನ ಮಾಲಕಿ ನಿಶ್ಚಲ ಆಳ್ವರವರು ನೂತನ ಸಂಸ್ಥೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಜೀವಿಸುವ ಪ್ರತಿಯೋರ್ವ ಮನುಷ್ಯನು ತಾನು ಅಂದವಾಗಿ ಕಾಣಬೇಕು ಎಂದು ಬಯಸುವುದು ಸಹಜ. ಅದರಲ್ಲೂ ಮಹಿಳೆಯರಲ್ಲಿ ಈ ಬಗ್ಗೆ ಜಾಸ್ತಿ ಕಾಳಜಿ ಇರುತ್ತದೆ. ಈ ನಿಟ್ಟಿನಲ್ಲಿ ಬ್ಯೂಟಿ ಪಾರ್ಲರ್ ಗಳು ಮಹಿಳೆಯರನ್ನು, ಹುಡುಗಿಯರನ್ನು ಹೆಚ್ಚೆಚ್ಚು ಅಂದವಾಗಿ ಕಾಣಿಸುವಂತಾಗಲು ಕಾರ್ಯ ನಿರ್ವಹಿಸುತ್ತಿವೆ. ಈ ಭಾಗದಲ್ಲಿ ವಿದ್ಯಾಸಂಸ್ಥೆಗಳಿರುವುದರಿಂದ ಹೆಚ್ಚಿನ ಉಪಯುಕ್ತತೆ ಪಡೆಯಬಹುದು ಎಂದು ಹೇಳಿ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಮಾಯಿದೆ ದೇವುಸ್ ಚರ್ಚ್ ನ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ನೂತನ ಸಂಸ್ಥೆಗೆ ಪವಿತ್ರಜಲ ಸಿಂಪಡಿಸಿ, ಮಾತನಾಡಿ, ದೇವರು ಪ್ರತಿಯೋರ್ವರಲ್ಲೂ ಪ್ರತಿಭೆಯನ್ನು ಕರುಣಿಸಿರುತ್ತಾನೆ. ಆದರೆ ಆ ಪ್ರತಿಭೆಯನ್ನು ಅನಾವರಣಗೊಳಿಸುವುದು ಬಹಳ ಮುಖ್ಯವಾಗುತ್ತದೆ. ಎಲ್ಲಿ ಗುಣಮಟ್ಟದ, ನಗುಮುಖದ ಸೇವೆಯಿದೆಯೋ ಅಲ್ಲಿ ಯಶಸ್ಸು ಖಂಡಿತಾ ದೊರಕಬಲ್ಲುದು ಎಂದು ಹೇಳಿ ಆಶೀರ್ವಚನ ನೀಡಿದರು.

ಸಂಸ್ಥೆಯ ಮಾಲಕಿ ಪ್ರಮೀಳ ವೇಗಸ್ ರವರ ಅತ್ತೆ ಸೆವ್ರಿನ್ ವೇಗಸ್, ಪತಿ ಪ್ರದೀಪ್ ವೇಗಸ್(ಬಾಬಾ), ಕಲ್ಲಾರೆ ನವಜೀವನ್ ಫ್ಲವರ್ಸ್ ಮಾಲಕ ಜೋನ್ ಪೀಟರ್ ಡಿ’ಸಿಲ್ವ, ಬನ್ನೂರು ಸಂತ ಅಂತೋನಿ ಚರ್ಚ್ ನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಜೆರಿ ಪಾಯಿಸ್, ರೋಬರ್ಟ್ ಡಿ’ಕುನ್ಹಾ ಸಹಿತ ಹಲವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕಿ ಪ್ರಮೀಳರವರು ಸ್ವಾಗತಿಸಿ, ಸಂಸ್ಥೆಯ ಅಭಿವೃದ್ಧಿಯಲ್ಲಿ ಸಹಕಾರ ನೀಡುವಂತೆ ಕೋರಿದರು.

ಸೇವೆಗಳು..
-ಫೇಶಿಯಲ್, ಬ್ಲೀಚ್, ವ್ಯಾಕ್ಸಿಂಗ್
-ಪೆಡಿಕ್ಯೂರ್ ಆಂಡ್ ಮ್ಯಾನಿಕ್ಯೂರ್
-ಐಬ್ರೋಸ್, ಹೇರ್ ಸ್ಪಾ
-ಹೇರ್ ಸ್ಟ್ರೇಯ್ಟನಿಂಗ್(ಶಾಶ್ವತ/ತಾತ್ಕಾಲಿಕ)
-ಹೇರ್ ಕಟ್ಟಿಂಗ್, ಕಲರಿಂಗ್, ಹೇರ್ ಮೆಹಂದಿ
-ಬ್ರೈಡಲ್ ಮೇಕಪ್, ಬ್ರೈಡಲ್ ಮೆಹಂದಿ ಡಿಸೈನ್

LEAVE A REPLY

Please enter your comment!
Please enter your name here