ಪುತ್ತೂರು: ಶಾಂತಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ವರ್ಷದ ಬ್ರಹ್ಮಶ್ರೀ ನಾರಾಯಣ ಗುರುಪೂಜೆ, ಭಜನೆ ಹಾಗೂ ಸನ್ಮಾನ ಕಾರ್ಯಕ್ರಮ ಮತ್ತು ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡು ಇದರ ರಜತಮಹೋತ್ಸವದ ಅಂಗವಾಗಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಇದರ ಆಶ್ರಯದಲ್ಲಿ ರಕ್ತದಾನ ಶಿಬಿರವು ಶಾಂತಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನ ಮೆಡಿಕಲ್ ಆಫೀಸರ್ ಡಾ.ರಾಮಚಂದ್ರ ಭಟ್ ರವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಎಂಬುದು ಶ್ರೇಷ್ಟದಾನ, ರಕ್ತದಾನ ನೀಡುವುದರ ಮಹತ್ವ ಹಾಗೂ ಈ ಬಗ್ಗೆ ಅರಿವನ್ನು ಅವರು ನೀಡಿದರು. ಮುಖ್ಯ ಅತಿಥಿ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಶಾಂತಿಗೋಡು ಗ್ರಾಮ ಸಮಿತಿಯು ಇತರ ಗ್ರಾಮ ಸಮಿತಿಗಳಿಗೆ ಮಾದರಿ ಆಗಿ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯು ನಿರ್ವಹಿಸುತ್ತಿರುವ ಸರ್ವ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಹಾಗೂ ನರಿಮೊಗರು ವಲಯ ಸಂಚಾಲಕ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಮಾತನಾಡಿ, ತಾನು ಸತತವಾಗಿ 62 ಬಾರಿ ರಕ್ತದಾನ ಮಾಡಿರುತ್ತೇನೆ. ತಾಲೂಕಿನಲ್ಲಿ ಬಿಲ್ಲವ ಸಂಘದ ಆಶ್ರಯದಲ್ಲಿ ಸ್ಥಾಪನೆಯಾಗಿ ಇಂದು ರಜತ ಮಹೋತ್ಸವದ ಸಂಭ್ರಮದಲ್ಲಿರುವ ಎಲ್ಲಾ ಗ್ರಾಮ ಸಮಿತಿಗಳು ನಡೆದು ಬಂದ ಹಾದಿಯ ಬಗ್ಗೆ ಅವರು ವಿವರಿಸಿದರು.
ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಸ್ಥಾಪಕಾಧ್ಯಕ್ಷ ಆನಂದ ಆರ್.ರೆಂಜಾಳ ಮಾತನಾಡಿ, ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಬಗ್ಗೆ ಕಾರ್ಯರೂಪದಲ್ಲಿ ಅನುಷ್ಠಾನವಾಗುತ್ತಿರುವ ಮಾದರಿ ಕಾರ್ಯದ ಬಗ್ಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ ಶಾಂತಿಗೋಡಯ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ನಾಗೇಶ್ ಸಾರಕರೆ ಮಾತನಾಡಿ, ಗ್ರಾಮ ಸಮಿತಿಯ ಹೂವಿನಂತಹ ಮನಸ್ಸಿನ ಹಿರಿಯ-ಕಿರಿಯ ಬಾಂಧವರ ಹಾಗೂ ಇತರ ಸಮಾಜದ ಆತ್ಮೀಯ ಬಂಧುಗಳ ಸಹಕಾರದೊಂದಿಗೆ ರಜತಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಮೊದಲ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದವರು ಅಭಿನಂದನಾರ್ಹರು ಎಂದರು.
ಗೌರಿ ಹೊನ್ನಪ್ಪ ಪೂಜಾರಿ ಪ್ರಾರ್ಥಿಸಿದರು. ಪುತ್ತೂರು ಬಿಲ್ಲವ ಸಂಘದ ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಾಂತಿಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಮಂಜುನಾಥ್, ಪುತ್ತೂರು ಯುವವಾಹಿನಿ ಅಧ್ಯಕ್ಷ ಉಮೇಶ್ ಬಾಯಾರು, ಶಾಂತಿಗೋಡು ಯುವವಾಹಿನಿ ಗ್ರಾಮ ಸಮಿತಿ ಅಧ್ಯಕ್ಷ ರಾಘವ ಬೊಳ್ಳೆಕ್ಕು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೋಹಿತ್ ಕಲ್ಕಾರ್, ನಾರಾಯಣ ಪೂಜಾರಿ ಕಲ್ಲರ್ಪೆ, ರಕ್ಷಿತ್ ಗೋಳಿತ್ತಡಿ, ಪ್ರಮೀಳಾ ಜನಾರ್ದನ ಆಚಾರ್ಯ, ಶಶಿ ಓಲಾಡಿ, ಗಣೇಶ್ ಕೈಂದಾಡಿರವರು ಅತಿಥಿಗಳಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ಶಾಂತಿಗೋಡು ಬಿಲ್ಲವ ವಿದ್ತಾರ್ಥಿ ಸಂಘದ ಅಧ್ಯಕ್ಷ ಚಂದ್ರಾಕ್ಷ ಪೇರಡ್ಕ ವಂದಿಸಿ, ನವ್ಯಾ ದಾಮೋದರ್ ಕಾರ್ಯಕ್ರಮ ನಿರೂಪಿಸಿದರು.