ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ- ಕಲಾಸಾಧಕಿ ಸವಿತಾ ಕೋಡಂದೂರ್ ಅವರಿಗೆ ಸನ್ಮಾನ

0


ಪುತ್ತೂರು : ಅಮ್ಮುಂಜೆ ಅನುದಾನಿತ ಹಿಪ್ರಾ ಶಾಲೆ ಯ ವೀರಯೋಧ ಯಾದವ್ ಪೂಜಾರಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಎಸಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.


ಸಮ್ಮೇಳನ ಅಧ್ಯಕ್ಷ ಹಿರಿಯ ಪತ್ರಕರ್ತ ಪ್ರೊ ಕೆ ಬಾಲಕೃಷ್ಣಗಟ್ಟಿ, ದ.ಕ ಕ.ಸಾ.ಪ ಅಧ್ಯಕ್ಷ ಡಾ ಎಂಪಿ ಶ್ರೀನಾಥ್ ,ಬಂಟ್ವಾಳ ತಾಲೂಕು ಕ.ಸಾ.ಪ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ರಾಜೇಶ್ವರಿ ,ರಾಷ್ಟ್ರಪ್ರಶಸ್ತಿ ವಿಜೇತ ಜೇನು ಕೃಷಿ ಕಲಾ ಪ್ರೋತ್ಸಾಹಕ ಕುಮಾರ್ ಪೆರ್ನಾಜೆ, ನ್ಯಾಯವಾದಿ ಅಶ್ವಿನಿ ಕುಮಾರ್ ರೈ, ಕಸಾಪ ಗೌರವ ಕಾರ್ಯದರ್ಶಿಗಳಾದ ರಮಾನಂದ ನೂಜಿಪ್ಪಾಡಿ, ಸ್ವಾಗತ ಸಮಿತಿಯ ಅಧ್ಯಕ್ಷ ಉಮೇಶ್ ಸಾಲ್ಯನ್ ಬೆಂಜನ ಪದವು, ಪ್ರಧಾನ ಸಂಚಾಲಕ ಅಬೂಬಕರ್, ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ವಾಮನಾ ಆಚಾರ್ಯ ,ಪ್ರಧಾನ ಕಾರ್ಯದರ್ಶಿ ಜನಾರ್ದನ ಅಮ್ಮುಂಜೆ, ವಿ. ಸು ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಬಿ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.


ಗ್ರಾಮೀಣ ಕಲಾಪ್ರತಿಭೆ:

ಕೃಷಿ ಜೊತೆ ಸಂಗೀತ ಶಾಸ್ತ್ರೀಯ, ಸುಗಮ ಸಂಗೀತ, ಸ್ಯಾಕ್ಸೋಫೋನ್ ಜೊತೆ ಗಾನ ವೈಭವ, ಸಪ್ತ ಮಾತೃಕೆಯರ ಗೀತ ಗಾಯನ, ಪುಟಾಣಿ ಮಕ್ಕಳಿಗೆ ಸಂಗೀತ ಶಾಲೆ, ಕುಮಾರ್ ಪೆರ್ನಾಜೆಯವರ ಸ್ವರ ಸಿಂಚನ ಕಲಾ ತಂಡದ ಮುಖ್ಯ ಹಾಡುಗಾರ್ತಿಯಾದ ಇವರಿಗೆ ಪರ್ನಾಜೆ ಪ್ರಶಸ್ತಿ, ಗಡಿನಾಡ ಧ್ವನಿ, ಸುಮಸೌರಭ ಪ್ರಶಸ್ತಿ, ಕರಾವಳಿ ರತ್ನ ಸಹಿತ ಹಲವಾರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮಾರ ಶಿಷ್ಯೆ, ನೂಜಯ ವೇ ಮೂ ಕೇಶವ ಭಟ್ ಮತ್ತು ದೇವಕಿ ದಂಪತಿಗಳ ಪುತ್ರಿ. ಪತಿ ‘ವಿಟ್ಲ ಸುಪ್ರಜಿತ್: ಐ ಟಿ ಐ. ಕಾಲೇಜು ಮಾಜಿ ಪ್ರಾಂಶುಪಾಲರು ಕೋಡಂದೂರು ರಘುರಾಮ್ ಶಾಸ್ತ್ರೀ.


LEAVE A REPLY

Please enter your comment!
Please enter your name here