ಪುತ್ತೂರು : ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ ಮಾ.4ರಂದು ಮಾಯಿದೆ ದೇವುಸ್ ಚರ್ಚ್‌ನ ಮಿನಿಹಾಲ್‌ನಲ್ಲಿ ಜರುಗಿತು.
ಶಾಲಾ ಸಂಚಾಲಕ ಅ|ವ| ಲಾರೆನ್ಸ್ ಮಸ್ಕರೇನ್ಹಸ್ ರವರು ಮಾತನಾಡಿ, ನಾವು ಕಲಿತ ಶಾಲೆಯನ್ನು ತುಂಬಾ ವರುಷಗಳ ಕಾಲ ಸ್ಮರಿಸಿ ಶಾಲೆಯಲ್ಲಿ ನಡೆಯುವ ಸಭೆಗಳಲ್ಲಿ ಭಾಗಿಯಾಗುವುದು ಬಹಳಷ್ಟು ವಿರಳ. ಆದರೆ ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಅವಶ್ಯಕ. ತಮ್ಮ ಈ ರೀತಿಯ ಸಹಕಾರದಿಂದ ಶಾಲೆಯು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಹಿರಿಯ ವಿದ್ಯಾರ್ಥಿನಿಯಾಗಿರುವ ರೋಸಲಿನ್ ಲೋಬೊ ಮಾತನಾಡಿ, 80 ವರುಷಗಳ ಇತಿಹಾಸ ಇರುವ ಈ ಶಾಲೆಯು, ಹಿರಿಯ ವಿದ್ಯಾರ್ಥಿನಿಯರ ಪ್ರೀತಿ ಹಾಗೂ ಸಹಕಾರದಿಂದ ಇನ್ನೂ ಖ್ಯಾತಿಯನ್ನು ಪಡೆಯಲಿ ಎಂದರು.
ಪದಾಧಿಕಾರಿಗಳ ಆಯ್ಕೆ:
2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಈ ಸಂದರ್ಭದಲ್ಲಿ ನಡೆದಿದ್ದು, ಅಧ್ಯಕ್ಷೆಯಾಗಿ – ಲೀನಾ ರೇಗೊ , ಉಪಾಧ್ಯಕ್ಷೆ ಮಮತಾ, ಕಾಯದರ್ಶಿಯಾಗಿ ರೀನಾ ರೆಬೆಲ್ಲೊ, ಜೊತೆ ಕಾರ್ಯದರ್ಶಿಯಾಗಿ ಭವ್ಯ, ಕೋಶಾಧಿಕಾರಿಯಾಗಿ ಶೈಲಾ ಮಸ್ಕರೇನ್ಹಸ್ ರವರು ಆಯ್ಕೆಯಾದರು.
ಶಿಕ್ಷಕಿ ಫೆಲ್ಸಿ ಡಿ ಸೋಜರವರು ಮನೋರಂಜನಾ ಆಟವನ್ನು ನಡೆಸಿ, ಹಿರಿಯ ವಿದ್ಯಾರ್ಥಿನಿ ಜೋಸ್ಪಿನ್ ಗೋನ್ಸಾಲ್ವಿಸ್ ರವರು ಬಹುಮಾನವನ್ನು ವಿತರಿಸಿದರು.
ಶಾಲಾ ಶಿಕ್ಷಕರಾದ ಲೆನಿಟಾ ಮೊರಾಸ್ ಮತ್ತು ಬಳಗದವರು ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ರೀನಾ ರೆಬೆಲ್ಲೊ ವರದಿ ವಾಚಿಸಿದರು. ಕೋಶಾಧಿಕಾರಿ ಶೈಲಾ ಮಸ್ಸರೇನ್ಹಸ್‌ರವರು ಸಂಘದ ಲೆಕ್ಕಪತ್ರ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷೆ ಲೀನಾ ರೇಗೋ ಸ್ವಾಗತಿಸಿ, ಶಿಕ್ಷಕಿ ಫೆಲ್ಸಿ ಡಿ ಸೋಜರವರು ವಂದಿಸಿ, ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.