ಮಂಗಳೂರಿನ ಪೆರಾರದಲ್ಲಿ ಪುತ್ತೂರಿನ ವೈಷ್ಣವಿ ನಾಟ್ಯಾಲಯದಿಂದ ಭರತನಾಟ್ಯ

0

ಪುತ್ತೂರು: ಮಂಗಳೂರಿನ ಕಿನ್ಮಿಮಜಲು ಪೆರಾರ ಶ್ರೀ ಬ್ರಹ್ಮ ದೇವರು ಇಷ್ಟ ದೇವತಾ ಬಲವಾಂಡಿ ಪಿಲಿಚಂಡಿ ದೇವಸ್ಥಾನದಲ್ಲಿ ನಡೆದ ಪ್ರತಿಷ್ಠಾ ಬ್ರಹ್ಮಕಲಶದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ವೈಷ್ಣವಿ ನಾಟ್ಯಾಲಯದವರಿಂದ ಭರತನಾಟ್ಯ ಹಾಗೂ ಭಕ್ತ ಪ್ರಹ್ಲಾದ ನೃತ್ಯ ರೂಪಕದ ಪ್ರದರ್ಶನ ಜರಗಿತು.

ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಕಾರ್ಯಕ್ರಮ ಜರಗಿತು. ರೂಪಕದ ಸಾಹಿತ್ಯವನ್ನು ಡಾ. ರಾಜೇಶ್ ಬೆಜ್ಜಂಗಳ ರಚಿಸಿದ್ದು, ಸಂಗೀತ ನಿರ್ದೇಶನವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ವೆಳ್ಳಿಕೋತ್ ವಿಷ್ಣು ಭಟ್ ನೀಡಿದ್ದಾರೆ.

ಮೃದಂಗದಲ್ಲಿ ಗಿತೇಶ್ ಕಾಂಞಂಗಾಡ್ , ಕೊಳಲು ರಾಜಗೋಪಾಲ್ ನಿಲೇಶ್ವರ , ರಿದಂ ನಲ್ಲಿ ರವಿಕಾಂತ್ ಮಾನ್ಯ ,ಕೀ ಬೋರ್ಡ್ ನಲ್ಲಿ ಬಾಬಣ್ಣ ಪುತ್ತೂರು ಸಹಕರಿಸಿದರು. ವೈಷ್ಣವಿ ನಾಟ್ಯಾಲಯದ ವಿವಿಧ ಶಾಖೆಗಳ 30 ಕಲಾವಿದರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here