ಕುಕ್ಕಾಜೆಯಲ್ಲಿ ಮೇಳೈಸಿದ ‘ಮ್ಯೂಸಿಕಲ್ ನೈಟ್ -2023’ – ಸಂಭ್ರಮದ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ

0

ಕೆಎಫ್ ಸಿ ಸಂಘಟನೆ ಈ ಭಾಗದಲ್ಲಿ ಸಮಾಜಕ್ಕೆ ದಾರಿದೀವಿಗೆಯಾಗಿದೆ: ಶ್ರೀ ಶ್ರೀಕೃಷ್ಣ ಗುರೂಜಿ

ಪ್ರೆಂಡ್ಸ್ ಕ್ಲಬ್ ಗಳು ಸಮಾಜದ ಬದಲಾವಣೆಗೆ ರಹದಾರಿ: ಅರುಣ್ ಕುಮಾರ್ ಪುತ್ತಿಲ

ವಿಟ್ಲ; ಕೆಎಫ್ ಸಿ ಮಾಣಿಲ ಈ ಭಾಗದಲ್ಲಿ ಪ್ರಕಾಶಮಾನವಾಗಿ ಬೆಳಗಿ ಸಮಾಜಕ್ಕೆ ದಾರಿದೀಪವಾಗಿದೆ. ನಮ್ಮ ಹಿರಿಯರು ಮಾಡಿದ ಪುಣ್ಯದ ಫಲವಿಂದು ಸಾಕಾರವಾಗಿದೆ‌. ಉತ್ತಮ ಸಮಾಜ ನಿರ್ಮಾಣಕ್ಕೆ ಇಂತಹ ಯುವಕರ ತಂಡದ ಸಾಧನೆ ಅಪಾರವಾಗಿದೆ‌ ಎಂದು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರು ಹೇಳಿದರು.

ಅವರು ಶ್ರೀಕ್ಷೇತ್ರ ಕುಕ್ಕಾಜೆಯಲ್ಲಿ ನಡೆದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಮಾ.9ರಂದು ರಾತ್ರಿ ಕೆ.ಎಫ್.ಸಿ. ಮಾಣಿಲ ಇದರ ವತಿಯಿಂದ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇವರಿಂದ ನಡೆದ ‘ ಕುಕ್ಕಾಜೆ ಮ್ಯೂಸಿಕಲ್ ನೈಟ್ -2023’ಅನ್ನು ಅವರು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು‌.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ದೇಶ ಪ್ರೇಮದ ಜೊತೆಗೆ ಸಾಮಾಜಿಕ ಕಳಕಳಿ‌ ನಮ್ಮಲ್ಲಿರಬೇಕು. ಸಮರ್ಪಿತ ಮನೋಭಾವ ನಮ್ಮಲ್ಲಿ ಬೆಳೆದುಬರಬೇಕು. ಪ್ರೆಂಡ್ಸ್ ಕ್ಲಬ್ ಗಳು ಸಮಾಜದಲ್ಲಿ ಹಲವಾರು ಬದಲಾವಣೆಗೆ ರಹದಾರಿಯಾಗಲಿದೆ. ಬದುಕು ಯಶಸ್ಸಾಗಲು ಧಾರ್ಮಿಕ ಕಾರ್ಯಕ್ರಮಗಳು ಪೂರಕ ಎಂದರು.

ಕೆ.ಎಫ್.ಸಿ ಮಾಣಿಲ ಇದರ ಅಧ್ಯಕ್ಷ ಹರಿಪ್ರಸಾದ್ ಕಾಮಜಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಲಿಪಗುಳಿ ಇಕೋಬ್ಲಿಸ್ ನ‌ ಮಾಲಕ ರಾಜರಾಮ್ ಸಿ.ಜಿ., ಶ್ರೀ ಕ್ಷೇತ್ರ ಕುಕ್ಕಾಜೆಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾರಾಜೆ, ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಳೆಕಲ್ಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಡಾ|ಗೀತಪ್ರಕಾಶ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸಣ್ಣಗುತ್ತು ಅಳಿಕೆ, ಕಾರ್ಯಾಧ್ಯಕ್ಷ ಯತೀಶ್ ಆಳ್ವ ಏಳ್ನಾಡುಗುತ್ತು, ಉದ್ಯಮಿ ದೇವಪ್ಪ ಪೂಜಾರಿ ಮುಂಬೈ ಮೊದಲಾದವರು ವೇದಿಕೆಯಲ್ಲಿದ್ದರು.

ಶ್ರೀ ಕ್ಷೇತ್ರ ಕುಕ್ಕಾಜೆಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಕಾರಾಜೆ, ಕೃಷಿಕ ರಾಜೇಶ್ ಶಂಕರ್ ಪಿ.ಜಿ. ಬೈಕುಂಜ ಹಾಗೂ ಸುಧಾಕರ ಪೂಜಾರಿ ಕೇಪುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀಧರ ಪಿ.ಕೆ.ಕುಕ್ಕಾಜೆ, ಆಶ್ವಿತಾ ಕುಕ್ಕಾಜೆ, ಶ್ರೀಜಾ ಕುಕ್ಕಾಜೆ ಸನ್ಮಾನ ಪತ್ರ ವಾಚಿಸಿದರು. ರವಿ ಎಸ್.ಎಂ. ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here