ಪುತ್ತೂರು: ಭಕ್ತಕೋಡಿ ಸ.ಹಿ.ಪ್ರಾ.ಶಾಲಾ ಕಟ್ಟಡಕ್ಕೆ 2022-23ನೇ ಸಾಲಿನ ವಿವೇಕ ಶಾಲಾ ಯೋಜನೆ ಅಡಿಯಲ್ಲಿ ಶಾಸಕರ ಶಿಫಾರಸ್ಸಿನ ಮೇರೆಗೆ ರೂ.55.60 ಲಕ್ಷ ಹಾಗೂ ಸಂಸದರ ನಿಧಿಯಿಂದ ರೂ.10 ಲಕ್ಷ ಅನುದಾನ ಮಂಜೂರುಗೊಂಡಿದ್ದು ಈ ಹಿನ್ನೆಲೆಯಲ್ಲಿ 5 ಕೊಠಡಿಗಳ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು ಇಲಾಖೆಯ ಅನುದಾನ ಸದ್ವಿನಿಯೋಗವಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು. ಶಾಲೆಯ ಕಟ್ಟಡಗಳು ಸರಿಯಾಗಿ ನಿರ್ಮಾಣವಾಗುವಂತೆ ಶಾಲೆಯ ಎಸ್‌ಡಿಎಂಸಿಯವರು ಮತ್ತು ಮುಖ್ಯಗುರುಗಳು ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್, ಭಕ್ತಕೋಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಸಂತ ಕೈಪಂಗಳದೋಳ, ಮುಂಡೂರು ಗ್ರಾ.ಪಂ ಸದಸ್ಯರಾದ ಚಂದ್ರಶೇಖರ ಎನ್.ಎಸ್.ಡಿ, ಕಮಲೇಶ್ ಎಸ್.ವಿ, ಕಾವ್ಯ ಕಡ್ಯ, ಎಸ್‌ಡಿಎಂಸಿ ಶಿಕ್ಷಣ ತಜ್ಞೆ ವಿಜಯಲಕ್ಷ್ಮಿ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಗೀತಾ ಕುಮಾರಿ ಸ್ವಾಗತಿದರು. ಶಿಕ್ಷಕ ವೃಂದದವರು ಸಹಕರಿಸಿದರು.