ಹೆಣ್ಣಿನ ಮುಖ ಸೌಂದರ್ಯವನ್ನು ವರ್ಣಿಸುವಾಗಲೆಲ್ಲಾ ಆಕೆಯ ನಯನ ಪ್ರಧಾನ ಪಾತ್ರ ವಹಿಸುತ್ತದೆ. ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ, ಕಮಲದ ಕಣ್ಣೋಳೆ ಮುಂತಾದ ಉಪಮೆಗಳು ಸಾಹಿತ್ಯದಲ್ಲಿ ಬೇಕಾದಷ್ಟು ಲಭ್ಯವಿದೆ. ಕಣ್ಣುಗಳು ಸುಂದರವಾಗಿದ್ದರೆ ಮುಖದ ಅಂದ ಇನ್ನಷ್ಟು ಹೆಚ್ಚುವುದು. ನಯನಮನೋಹರವಾಗಿರಬೇಕು ಅಂದರೆ ಕಣ್ಣಿನ ಆರೋಗ್ಯವೂ ಅಷ್ಟೇ ಮುಖ್ಯ. ಹೊಳೆಯುವ ಆಕರ್ಷ ಕಣ್ಣುಗಳು ನೋಡಲು ಚೆಂದ. ಎಲ್ಲರಿಗೂ ತಿಳಿದಿರುವ ಹಾಗೆ ಕಣ್ಣು ಪಂಚೇಂದ್ರಿಯಗಳಲ್ಲ ಒಂದು. ಮಾತ್ರವಲ್ಲ ಕಣ್ಣು ಆತ್ಮದ ಕೈಗನ್ನಡಿಯೆಂದೂ ಹೇಳಲಾಗುತ್ತದೆ. ನಮ್ಮೊಳಗಿನ ಆಂತರಿಕ ಭಾವನೆಗಳನ್ನು ಅಭಿವ್ಯಕ್ತ ಪಡಿಸುವುದೇ ನೇತ್ರಗಳು. ಆರೋಗ್ಯಯುತ ಅಕ್ಷಿ ವ್ಯಕ್ತಿಯ ಆಸ್ತಿ ಎಂದೇ ಹೇಳಬಹುದು. ಮಿನುಗುವ ನಯನಗಳಿಗಾಗಿ ಕೆಲವು ಎಚ್ಚರಿಕೆಯನ್ನು ವಹಿಸಬೇಕಾಗಿದೆ. ವಿಟಮಿನ್ ಎ ಯುಕ್ತ ಮೊಟ್ಟೆ, ಮೀನು, ಬೆಣ್ಣೆ, ಹಾಲು, ಹಸಿರು ತರಕಾರಿ, ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿದರೆ ಕಣ್ಣು ತಂಪಾಗಿರುತ್ತದೆ.
- ಹೆಚ್ಚುತ್ತಿರುವ ತಾಪಮಾನದಲ್ಲಿ ನಮ್ಮ ಓದುಗರಿಗಾಗಿ ಕಣ್ಣಿನ ರಕ್ಷಣೆ ಬಗ್ಗೆ ಕೆಲವು ಸಲಹೆಗಳು ಇಲ್ಲಿದೆ
- ಸೂರ್ಯನ ಬೆಳಕಿನಿಂದ ನಿಮ್ಮ ಕಣ್ಣನ್ನು ರಕ್ಷಿಸಿಕೊಳ್ಳಿ. ಬಿಸಿಲಲ್ಲಿ ಹೊರಗೆ ಹೋಗುವಾಗ ಸನ್‌ಗ್ಲಾಸ್ ಬಳಸಿ.
- ತಣ್ಣೀರಿನಲ್ಲಿ ಕಣ್ಣುಗಳನ್ನು ತೊಳೆಯಿರಿ.
- ಕಣ್ಣಿನ ಕೆಳಗೆ ಕಪ್ಪು ವೃತ್ತ ಇದ್ದರೆ ಅದರ ಮೇಲೆ ಆಲೂಗಡ್ಡೆ ಅಥವಾ ಸೌತೆಕಾಯಿಯ ತುಂಡುಗಳನ್ನಿಡಿ.
- ಕಣ್ಣುಗಳಲ್ಲಿ ಉರಿತ, ತುರಿಕೆ ಇದ್ದರೆ ತಲೆಗೆ ಮೊಸರು ಹಾಕಿ ಮಸಾಜ್ ಮಾಡಿದರೆ ತಂಪಾಗುತ್ತದೆ.
- ಆಯಾಸದಿಂದ ಕಣ್ಣುಗಳು ಸೋತುಹೋಗಿದ್ದರೆ ಹತ್ತಿಯನ್ನು ತಣ್ಣನೆ ಹಾಲಿನಲ್ಲಿ ಅದ್ದಿ 10 ನಿಮಿಷಗಳವರೆಗೆ ಕಣ್ಣಿಗಿಟ್ಟಲ್ಲಿ ವಿಶ್ರಾಂತಿ ಸಿಗುತ್ತದೆ.
- ಗಡಿಯಾರದ ದಿಕ್ಕಿನಲ್ಲಿ ಮತ್ತು ವಿರುದ್ಧ ದಿಕ್ಕಿನಲ್ಲಿ ಕಣ್ಣುಗಳನ್ನು ತಿರುಗಿಸಿ ಇದರಿಂದಲೂ ಕಣ್ಣುಗಳಿಗೆ ವಿಶ್ರಾಂತಿ ದೊರಕುತ್ತದೆ
- ಒಂದು ಚಮಚದಷ್ಟು ಒಣಗಿದ ನೆಲ್ಲಿಕಾಯಿಯನ್ನು ರಾತ್ರಿ ನೆನೆಸಿಟ್ಟು ಆ ನೀರನ್ನು ಕಣ್ಣಿಗೆ ಸೋಕಿಸಿ ಮರುದಿನ ಶುದ್ಧ ಬಟ್ಟೆಯಿಂದ ಮೃದುವಾಗಿ ಒರೆಸಿ. ನಿಮ್ಮ ಕಣ್ಣುಗಳು ಕಾಂತಿಯುಕ್ತವಾಗುತ್ತದೆ.
- ಅತಿಯಾದ ಓದು, ನಿದ್ದೆಗೆಡುವುದು, ಟಿವಿ ನೋಡುವುದು, ಮೊಬೈಲ್ ನೋಡುವುದು, ಕಂಪ್ಯೂಟರ್ ಬಳಸುವುದು ಕಡಿಮೆ ಮಾಡಿ.ಇಲ್ಲವಾದಲ್ಲಿ ಕಣ್ಣೀನ ಸುತ್ತಲೂ ಕಪ್ಪು ವರ್ತುಲ ಬೆಳೆಯುತ್ತದೆ.
- ಬಾದಾಮಿ ಕ್ರೀಂ ನಿಂದ ಕಣ್ಣಿನ ಸುತ್ತಲೂ 5 ನಿಮಿಷ ಮಸಾಜ್ ಮಾಡಿದಲ್ಲಿ ಕಪ್ಪು ವರ್ತುಲದಿಂದ ರಕ್ಷಣೆ ಪಡೆಯಬಹುದು.
- ಕಣ್ಣಿನ ಸುತ್ತಲೂ ಹಾಲನ್ನು ಪ್ರತಿನಿತ್ಯ ಹಚ್ಚುವುದರಿಂದಲೂ ಕಪ್ಪು ವರ್ತುಲ ಕಡಿಮೆಯಾಗುತ್ತದೆ.
- ಹತ್ತಿಗೆ ರೋಸ್‌ವಾಟರ್ ಹಾಕಿ ಕಣ್ಣಿನ ಮೇಲೆ ಹತ್ತು ನಿಮಿಷ ಇಡುವುದರಿಂದಲೂ ಕಪ್ಪು ವರ್ತುಲ ಕಡಿಮೆಯಾಗುತ್ತದೆ.
- ಐಸ್‌ಕ್ಯೂಬನ್ನು ಟೀ ಡಿಕಾಕ್ಷನ್‌ನಲ್ಲಿಟ್ಟು 1 ತಾಸು ಫ್ರಿಡ್ಜ್‌ನಲ್ಲಿಟ್ಟು ಕಣ್ಣಿಗೆ ಹಚ್ಚಿ ಒಂದು ತಾಸಿನ ನಂತರ ತೊಳೆಯಿರಿ.
- ರಾತ್ರಿ ಮಲಗುವ ಮುನ್ನ ಸೌತೆಕಾಯಿ ರಸವನ್ನು ಕಣ್ಣುಗಳ ಸುತ್ತ ಹಚ್ಚಿ ಮಲಗಿ
- ಟೊಮೆಟೋದ ಕಾಲು ಭಾಗ, ಅರಸಿನ ಪುಡಿ, ನಿಂಬೆರಸ ಮತ್ತು ಕಡ್ಲೆ ಹಿಟ್ಟನ್ನು ಚೆನ್ನಾಗಿ ಕಲಸಿ ಆ ಮಿಶ್ರಣವನ್ನು ಕಣ್ಣಿನ ಸುತ್ತ ಹಚ್ಚಿ ಒಣಗಿದ ನಂತರ ತೊಳೆಯಿರಿ. ಕಣ್ಣಿನು ಸುತ್ತಲೂ ಇರುವ ಕಪ್ಪು ವರ್ತುಲ ಮಾಯವಾಗುತ್ತದೆ.
- ಕಾಲಕಾಲಕ್ಕೆ ಕಣ್ಣಿನ ತಜ್ಞರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ
ಉತ್ತಮ ಗುಣಮಟ್ಟದ ಕನ್ನಡಕ ಮತ್ತು ಸನ್‌ಗ್ಲಾಸ್ (ತಂಪು ಕನ್ನಡಕ)ಗಳಿಗಾಗಿ ಇಲ್ಲಿಗೆ ಭೇಟಿ ಕೊಡಿ
ಸೋನಾ ಓಪ್ಟಿಕಲ್ಸ್
ನುರಿತ ಕನ್ನಡಕಗಳ ಮಳಿಗೆ
ಪುತ್ತೂರು ಸೆಂಟರ್, ಹಳೇ ತಾಲೂಕು ಕಛೇರಿ ರಸ್ತೆ, ಪುತ್ತೂರು
ಫೋನ್: 08251-231105, 298025