ಸಿಂಸಾರುಲ್ ಹಖ್ ಅವರ `ಪುಟ್ಟನ ಕನಸು’ ಮಕ್ಕಳ ಕವನ ಸಂಕಲನ ಬಿಡುಗಡೆ

0

ಪುತ್ತೂರು: ಗಡಿನಾಡ ವಿದ್ಯಾಸಂಸ್ಥೆ ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯದಲ್ಲಿ ಜರುಗಿದ,ಆರನೇಯ ಕರ್ನಾಟಕ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ,ಪತ್ರಕರ್ತ ಮಲಾರ್ ಜಯರಾಮ ರೈಯವರು ಯುವಕವಿ ಮುಹಮ್ಮದ್ ಸಿಂಸಾರುಲ್ ಹಖ್ ಬರೆದಿರುವ `ಪುಟ್ಟನ ಕನಸು’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವ ಸಂಸ್ಥಾನಮ್‌ನ ಮಾತಾನಂದಮಯಿ, ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ,ಸಮ್ಮೇಳನದ ಪೂರ್ವಾಧ್ಯಕ್ಷರಾದ ನಾರಾಯಣ ರೈ ಕುಕ್ಕುವಳ್ಳಿ, ಕಾವು ಹೇಮನಾಥ ಶೆಟ್ಟಿ, ನಿವೃತ್ತ ಶಿಕ್ಷಣಾಧಿಕಾರಿ, ಹಿರಿಯ ಸಾಹಿತಿ ಎಸ್.ಜಿ.ಕೃಷ್ಣ, ಸಾಹಿತ್ಯ ಸಂಘಟಕ ಕಲಾಪ್ರೇಮಿ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ, ಗಡಿನಾಡ ಸೇವಾಟ್ರಸ್ಟ್ ನ ಸಂಚಾಲಕ, ಡಾ| ಹಾಜಿ ಅಬೂಬಕ್ಕರ್ ಆರ್ಲಪದವು,ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ,ಹಿರಿಯರಾದ ಕಡಂದೇಲು ಈಶ್ವರ ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಮುಹಮ್ಮದ್ ಸಿಂಸಾರುಲ್ ಹಖ್ ಅವರು ಡಾ.ಹಾಜಿ ಅಬೂಬಕ್ಕರ್ ಆರ್ಲಪದವು ಮತ್ತು ಫಾತಿಮ್ಮತ್ ಝುಹರ ಅವರ ಪುತ್ರ.

LEAVE A REPLY

Please enter your comment!
Please enter your name here