ಗುಮ್ಮಟೆಗದ್ದೆ: ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ಗುಳಿಗ ನೇಮೋತ್ಸವ

0

ಬೆಟ್ಟಂಪಾಡಿ: ಇಲ್ಲಿನ ಗುಮ್ಮಟೆಗದ್ದೆ ಶ್ರೀಕೃಷ್ಣನಗರದ ಸಮೃದ್ಧಿ ಯುವ ವೇದಿಕೆ, ಶ್ರೀಕೃಷ್ಣ ಭಜನಾ ಮಂಡಳಿ ಮತ್ತು ಸಮೃದ್ಧಿ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ 20 ನೇ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಗುಳಿಗ ದೈವಕ್ಕೆ ಹರಕೆ ನೇಮೋತ್ಸವವು ಮಾ. 11 ರಂದು ನೆರವೇರಿತು.

ಬೆಳಿಗ್ಗೆ ಗಣಪತಿ ಹೋಮ, ಸಂಜೆ ವೇ.ಮೂ. ದಿನೇಶ್ ಮರಡಿತ್ತಾಯರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ಬಳಿಕ ಚೆಲ್ಯಡ್ಕ ದೈವಸ್ಥಾನದಿಂದ ಭಂಡಾರ ಬಂದು ರಾತ್ರಿ ಗುಳಿಗ ದೈವದ ಹರಕೆ ನೇಮೋತ್ಸವ ನೆರವೇರಿತು.

ಇದೇ ವೇಳೆ ಶ್ರೀಕೃಷ್ಣ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವೆ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿ ನೂರಾರು ಭಕ್ತಾಭಿಮಾನಿಗಳು ಅನ್ನಪ್ರಸಾದ ಸ್ವೀಕರಿಸಿದರು. ಸಮಿತಿಗಳ ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ವಿವಿಧ ರೀತಿಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here