ಪುತ್ತೂರು:ಖ್ಯಾತ ಬಹುಭಾಷಾ ಚಲನಚಿತ್ರ ನಟ ವಿನೋದ್ ಆಳ್ವ ಅವರ ತಾಯಿ, ಮೇನಾಲ ದಿ.ಆನಂದ ಆಳ್ವರ ಪತ್ನಿ ಡೆಬ್ಬೇಲಿ ವಿಮಲ ಆಳ್ವ(88ವ.)ರವರು ಮಾ.12ರಂದು ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳೂರುನಲ್ಲಿ ಮಗಳ ಮನೆಯಲ್ಲಿ ವಾಸವಿದ್ದು ಆರೋಗ್ಯವಾಗಿಯೇ ಇದ್ದ ವಿಮಲ ಆಳ್ವ ಅವರು ಕೆಲ ದಿನಗಳ ಹಿಂದೆ ನಡೆದ ಕುತ್ಯಾಳ ದೇವಸ್ಥಾನದ ಜಾತ್ರೆಗೆ ಆಗಮಿಸಿದ್ದವರು ವಿನೋದ್ ಆಳ್ವ ಅವರ ಮನೆಯಲ್ಲಿ ತಂಗಿದ್ದರು.ಬಳಿಕ ಮಂಗಳೂರಿಗೆ ಹಿಂತಿರುಗಿದ್ದ ಅವರು ದಿಢೀರ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು.
ಮೃತರು ವಿನೋದ್ ಆಳ್ವ ಸಹಿತ ಇಬ್ಬರು ಪುತ್ರರು, ಐವರು ಪುತ್ರಿಯರನ್ನು ಅಗಲಿದ್ದಾರೆ.