




ಕಡಬ: 2022-23 ನೇ ಸಾಲಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅನುಷ್ಟಾನಗೊಳಿಸಲಾದ ಗ್ರಾಮ ಪಂಚಾಯತ್ ರಸ್ತೆಗಳನ್ನು ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮಾ 13ರಂದು ಉದ್ಘಾಟಿಸಲಾಯಿತು.



ಚೆಂಡೆಹಿತ್ಲು-ಕಲ್ಲಪಾಪು ರಸ್ತೆಯನ್ನು ಗ್ರಾ.ಪಂ. ಅಧ್ಯಕ್ಷ ಶಿವಶಂಕರ್ ಕೆ. ರೈಲ್ವೇ ಸ್ಟೇಷನ್ ವಾಲ್ತಾಜೆ ರಸ್ತೆಯನ್ನು ಸದಸ್ಯೆ ಚಂದ್ರಾವತಿ, ನೆಟ್ಟಣ ಪಾಲ್ತಾಜೆ ರಸ್ತೆಯನ್ನು ಸುಧೀರ್ ಕುಮಾರ್ ಶೆಟ್ಟಿಯವರು ಉದ್ಘಾಟಿಸಿದರು.





ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಬೇಬಿ ಉಮೇಶ ನಾಯ್ಕ, ಸಾಮಾಜಿಕ ಕಾರ್ಯಕರ್ತ ರಮೇಶ್ ವಾಲ್ತಾಜೆ, ಪೀಟರ್ ತುಳಸೀಧರ, ಶ್ರೀನಾಥ್ ನೆಟ್ಟಣ, ಜಿಮ್ಮಿ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಪಂಚಾಯತ್ ಸಭಾಭವನದಲ್ಲಿ ಅಮೃತ ಆರೋಗ್ಯ ಅಭಿಯಾನದ ಅಂಗವಾಗಿ ಆರೋಗ್ಯದ ಬಗ್ಗೆ ತರಬೇತಿ ಕಾರ್‍ಯಕ್ರಮ ನಡೆಯಿತು. ಸಭೆಯಲ್ಲಿ ಆರೋಗ್ಯ ಅಮೃತ ಯೋಜನೆಯ ಕಾರ್ಯಕರ್ತರಾದ ಶ್ರೀಮತಿ ಕಾವ್ಯ ಮತ್ತು ಶ್ರೀಮತಿ ಲೀಲಾವತಿಯವರು ತರಬೇತಿಯನ್ನು ನೀಡಿದರು. ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಆರೋಗ್ಯ ಸಹಾಯಕಿ ಆಶಾ ಕಾರ್ಯಕರ್ತೆಯರು ಅಂಗವಾಡಿ ಕಾರ್ಯಕರ್ತೆಯರು ಕಾರ್ಯಪಡೆಯ ಎಲ್ಲಾ ಸದಸ್ಯರು ಭಾಗವಹಿಸಿದರು.





