ಬೆಟ್ಟಂಪಾಡಿ: ಇಲ್ಲಿನ ಇರ್ದೆ ಬಾಲ್ಯೊಟ್ಟುಮಾರ್ ತರವಾಡು ಮನೆಯಲ್ಲಿ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಮಾ.12 ಮತ್ತು 13 ರಂದು ಜರಗಿತು.
ಮಾ. 12 ರಂದು ಬೆಳಿಗ್ಗೆ ಗಣಪತಿ ಹವನ, ನಾಗದೇವರು, ಧರ್ಮದೈವ ಧೂಮಾವತಿ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ, ಶ್ರೀ ಸತ್ಯನಾರಾಯಣ ದೇವರ ಪೂಜೆ, ಶ್ರೀ ವೆಂಕಟ್ರಮಣ ದೇವರ ಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಸಂಜೆ ಧರ್ಮದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗೆದು ರಾತ್ರಿ ಕಲ್ಲಾಳ್ದಗುಳಿಗ ದೈವದ ನೇಮ ನಡೆದು ಅನ್ನಸಂತರ್ಪಣೆ ನಡೆದ ಬಳಿಕ ವರ್ಣರ ಪಂಜುರ್ಲಿ ನೇಮ, ಕುಪ್ಪೆ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ನೇಮ ನಡೆಯಿತು.
ಮಾ. 13 ರಂದು ಬೆಳಿಗ್ಗೆ ಧರ್ಮದೈವ ಧೂಮಾವತಿ ದೈವದ ನೇಮ, ಸಂಜೆ ಕೊರತಿ ದೈವದ ನೇಮ, ರಾತ್ರಿ ಕೊರಗಜ್ಜ ದೈವದ ನೇಮ ನಡೆಯಿತು. ಸ್ಥಳೀಯ ವಿವಿಧ ಮನೆತನಗಳ ಪ್ರಮುಖರು, ಬಾಲ್ಯೊಟ್ಟುಮಾರ್ ಕುಟುಂಬಸ್ಥರು, ಬಂಧು ಮಿತ್ರರು ಪಾಲ್ಗೊಂಡು ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದರು.