ಕಡಬದ ನಿಡ್ಡೋ, ಹೇರದಲ್ಲೂ ಬೆಂಕಿ

0

ಕಡಬ: ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದ ಹೇರ ಹಾಗೂ ನಿಡ್ಡೋ ಅರಣ್ಯ ಪ್ರದೇಶದಲ್ಲೂ ಬೆಂಕಿ ಅನಾಹುತ ಉಂಟಾಗಿದೆ. ರವಿವಾರದಿಂದ ಬೆಂಕಿ ಹತ್ತಿಕೊಂಡಿದ್ದು ಈ ಅನಾಹುತದ ಬಗ್ಗೆ ತಿಳಿದು ಬಂದಿದೆ.

ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೋ, ಕಾನಾವು ಭಾಗದಲ್ಲಿ ಬೆಂಕಿ ನೆಲ ಭಾಗದ ತರಗೆಲೆ, ಪೊದೆಗಳಲ್ಲಿ ಹೊತ್ತಿ ಉರಿಯುತ್ತಿದೆ. ಹೇರ ಪ್ರದೇಶದಲ್ಲೂ ಬೆಂಕಿ ವ್ಯಾಪಕವಾಗಿ ಹೊತ್ತಿ ಉರಿಯುತ್ತಿದೆ. ದೂರದ ಪ್ರದೇಶಗಳಿಗೆ ಬೆಂಕಿ ಉರಿಯುತ್ತಿರುವುದು ಕಂಡು ಬರುತ್ತಿದೆ.

ನಿಡ್ಡೋದಲ್ಲಿ ಪುತ್ತೂರು ಅಗ್ನಿಶಾಮಕ ದಳದ ಸಹಕಾರದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೇರ ಭಾಗದಲ್ಲಿ ಅರಣ್ಯ ಸಿಬ್ಬಂದಿ, ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here