ಪಾಣಾಜೆ; ಒಡ್ಯ ಶಾಲೆಗೆ ಶಾಸಕರಿಂದ ವಿವಿಧ ಮೂಲಭೂತ ಸೌಲಭ್ಯ ಹಸ್ತಾಂತರ

0

ನಿಡ್ಪಳ್ಳಿ; ಸರಕಾರಿ ಉನ್ನತ  ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಇಲ್ಲಿಗೆ ಕರ್ನಾಟಕ ಸರಕಾರದ ವಿಶೇಷ  ಅನುದಾನದಲ್ಲಿ ನೀಡಲಾದ ವಿವಿಧ ಮೂಲಭೂತ ಸೌಲಭ್ಯಗಳನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಹಸ್ತಾಂತರಿಸಿದರು.

 ಒಡ್ಯ ಶಾಲೆಯಲ್ಲಿ ನಡೆದ 6 ನೇ ಗಡಿನಾಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ  ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಟಿವಿ ಮತ್ತು ಬೆಂಚು ಡೆಸ್ಕ್ ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಪ್ಪ ಪೂಜಾರಿ ಬೊಳ್ಳಿಂಬಳ, ಮಾಜಿ ಸೈನಿಕರಾದ ರಮಾನಾಥ ರೈ ಪಡ್ಯಂಬೆಟ್ಟು, ಎಸ್. ಡಿ. ಎಂ. ಸಿ ಅಧ್ಯಕ್ಷ ದೇವಪ್ಪ ನಾಯ್ಕ ಕೊಂದಲ್ಕಾನ,ದಾನಿಗಳಾದ ಕೃಷ್ಣ ಭಟ್ ಬಟ್ಯಮೂಲೆ , ಶಂಕರ ರೈ ಬಾಳೆಮೂಲೆ,ಮಾಜಿ ಪಂಚಾಯತ್ ಸದಸ್ಯರಾದ ರಘುನಾಥ ಪಾಟಾಳಿ ಅಪಿನಿಮೂಲೆ, ಮುಖ್ಯಗುರು ಜನಾರ್ಧನ ಅಲ್ಚಾರು , ಸಹಶಿಕ್ಷಕ ಉಸ್ಮಾನ್ ಮಂಚಿ, ಸಹಶಿಕ್ಷಕಿ ದಿವ್ಯಾ ಪಡುಬಿದ್ರಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here