ಮನೆಗೆ ಪಡೆದುಕೊಂಡ ನೀರಿನ ದುರ್ಬಳಕೆ ಮಾಡಿದರೆ ಮುನ್ಸೂಚನೆ ನೀಡದೆ ಸಂಪರ್ಕ ಕಡಿತ-ನಗರಸಭೆ ಎಚ್ಚರಿಕೆ

0

ಪುತ್ತೂರು:ನಗರಸಭಾ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕುಡಿಯುವ ನೀರು ಸಂಪರ್ಕಗಳನ್ನು ಪಡೆದುಕೊಂಡಿರುವ ಬಳಕೆದಾರರು ತಮ್ಮ ಮನೆಗೆ ಪಡೆದುಕೊಂಡಿರುವ ನೀರಿನ ಜೋಡಣೆಯನ್ನು ಕೃಷಿ ಸೇರಿದಂತೆ ಇತರ ಕೆಲಸಗಳಿಗೆ ಉಪಯೋಗಿಸಿ ದುರ್ಬಳಕೆ ಮಾಡಿದರೆ ಯಾವುದೇ ಮುನ್ಸೂಚನೆ ನೀಡದೆ ನೀರಿನ ಜೋಡಣೆಯನ್ನು ತುಂಡರಿಸಲಾಗುವುದು ಎಂದು ನಗರಸಭೆ ಎಚ್ಚರಿಕೆ ನೀಡಿದೆ.

ಈಗಾಗಲೇ ನೀರಿನ ದುರ್ಬಳಕೆ ಕುರಿತು ಸಾಕಷ್ಟು ದೂರುಗಳು ಬಂದಿವೆ. ನೀರು ದುರ್ಬಳಕೆಯಿಂದ ಎತ್ತರ ಪ್ರದೇಶದಲ್ಲಿ ವಾಸಿಸುತ್ತಿರುವ ನೀರಿನ ಜೋಡಣೆದಾರರಿಗೆ ನೀರು ಸಿಗದೆ ಸಮಸ್ಯೆ ಆಗಿದೆ. ನಗರಸಭಾ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ದುರ್ಬಳಕೆ ಮಾಡಿದರೆ ಮುನ್ಸೂಚನೆ ನೀಡದೆ ಸಂಪರ್ಕ ಕಡಿತ ಮಾಡಲಾಗುವುದು.

ಮುಂದಿನ ಕಷ್ಟ ನಷ್ಟಗಳಿಗೆ ಜೋಡಣೆದಾರರೇ ಹೊಣೆಯಾಗುತ್ತಾರೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊಟೇಲ್‌ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರು ನೀಡಬೇಕು ಎಂದೂ ಅವರು ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here