ತಾಂತ್ರಿಕ ಸಮಸ್ಯೆಯಿಂದ ಕೆಟ್ಟು ನಿಂತ ಸವಣೂರು ಮೆಸ್ಕಾಂ ವಿದ್ಯುತ್ ಪರಿವರ್ತಕ; 45 ಲಕ್ಷ ರೂ. ವೆಚ್ಚದ ನೂತನ ಪರಿವರ್ತಕ ಅಳವಡಿಕೆ

0

ಸವಣೂರು : ಸವಣೂರು ಮೆಸ್ಕಾಂ ವಿದ್ಯುತ್ ಸಬ್ ಸ್ಟೇಷನ್ ನಲ್ಲಿ 33/11  KVA  ವಿದ್ಯುತ್ ಪರಿವರ್ತಕ (Transformer) ಕಳೆದ ಮೂರು ದಿನಗಳಿಂದ ಕೆಟ್ಟು ಹೋಗಿತ್ತು. ಇದೀಗ ಅಂದಾಜು ರೂ.45 ಲಕ್ಷ ವೆಚ್ಚದ ಪರಿವರ್ತಕದ ಅಳವಡಿಕೆ ಕಾರ್ಯ ನಡೆಯುತ್ತಿದೆ. ಇದು ಬೃಹತ್ ಪರಿವರ್ತಕವಾದರಿಂದ ಮಂಗಳೂರಿನಿಂದ ಅದನ್ನು ತರಿಸಿ ವ್ಯವಸ್ಥೆ ಮಾಡಲಾಗುತ್ತಿದೆ.

ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್ ಅಂಗಾರ ಅವರು ಮೆಸ್ಕಾಂನ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ ತುರ್ತಾಗಿ ಪರಿವರ್ತಕ ಅಳವಡಿಸಲು ಸೂಚನೆ ನೀಡಿದ್ದರು.

ಮೆಸ್ಕಾಂ ನಿರ್ದೇಶಕರಾದ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಪರಿವರ್ತಕ ಅಳವಡಿಕೆ ಕಾರ್ಯವನ್ನು ಪರಿಶೀಲಿಸಿದರು.

ಪರಿವರ್ತಕದ ಆಯಿಲ್ ಸರ್ಕ್ಯುಲೇಷನ್, ಕಾರ್ಯಕ್ಷಮತೆಗೆ ಸಂಬಂಧಿಸಿದ ಇನ್ನಿತರ ಪ್ರಾಯೋಗಿಕ ಕೆಲಸಕಾರ್ಯಗಳನ್ನು ಪರಿಶೀಲಿಸಿ ಬುಧವಾರ ಮಧ್ಯಾಹ್ನದ ಮೊದಲು ಸಮಸ್ಯೆಯನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮೆಸ್ಕಾಂ ನಿರ್ದೇಶಕ ಕಿಶೋರ್ ಕುಮಾರ್ ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಸಂತ ಕುಮಾರ್, ಸಹಾಯಕ ಕಾರ‍್ಯನಿರ್ವಾಹಕ ಇಂಜಿನಿಯರ್ ಗ್ರಾಮಾಂತರ ಉಪವಿಭಾಗ ಮೆಸ್ಕಾಂ ಕುಂಬ್ರ, ತಾಂತ್ರಿಕ ವಿಭಾಗದ AE ಸಚಿನ್ ಅವರ ತಂಡ, ಸವಣೂರು ವಿತರಣಾ ಕೇಂದ್ರದ ಜೆ.ಇ ಸವಿತಾ, ಜೆ.ಇ ನಾಗರಾಜ್ ಹಾಗೂ ನೌಕರರು, ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾ.ಕೃ.ಪ.ಸ.ಸಂ.ದ ಉಪಾಧ್ಯಕ್ಷ ತಾರಾನಾಥ ಕಾಯರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here