ಫಿಲೋಮಿನಾ ಕಾಲೇಜಿಗೆ ಪದವಿ, ಸ್ನಾತಕೋತ್ತರ ಪದವಿಯಲ್ಲಿ 20 ರ‍್ಯಾಂಕ್

0

ಪುತ್ತೂರು: ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ 2022-23ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ 7 ಹಾಗೂ ಸ್ನಾತಕೋತ್ತರಪದವಿ ಪರೀಕ್ಷೆಯಲ್ಲಿ 13 ರ‍್ಯಾಂಕ್‌ಗಳು ಬಂದಿರುತ್ತವೆ.

ಪದವಿ ವಿಭಾಗ: ಬಿಸಿಎ ಪದವಿ ವಿಭಾಗದಲ್ಲಿ ಫಾತಿಮತ್ ಸಾನಿದರವರು ಶೇ.97.4 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಇವರು ಕೂರ್ನಡ್ಕ ನಿವಾಸಿ ಅಬ್ದುಲ್ ಖಾದರ್ ಪಿಎ ಹಾಗೂ ಹಾಜಿರ ದಂಪತಿಯ ಪುತ್ರಿ. ಬಿಎಸ್‌ಸಿ ವಿಭಾಗದಲ್ಲಿ ಧೀರಜ್ ಎಂ.ರವರು ಶೇ 97.94 ಅಂಕಗಳೊಂದಿಗೆ ಮೂರನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ದರ್ಬೆಯ ಮೋಹನ್ ಆಚಾರ್ಯ ಹಾಗೂ ಶಾರದಾ ದಂಪತಿಯ ಪುತ್ರ. ಶ್ರೀಶ ಎಂ.ಎಸ್.ರವರು ಬಿಎಸ್‌ಸಿ ವಿಭಾಗದಲ್ಲಿ ಶೇ.97.82 ಅಂಕಗಳನ್ನು ಪಡೆದು 5ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಅಳಿಕೆಯ ಸಂಕಪ್ಪ ಗೌಡ ಹಾಗೂ ಶಾರದಾ ದಂಪತಿಯ ಪುತ್ರ. ಬಿಬಿಎ ವಿಭಾಗದ ಹರ್ಷಿತ ಕೆ.ರವರು ಶೇ.91.14 ಅಂಕಗಳೊಂದಿಗೆ 5ನೇ ರ‍್ಯಾಂಕ್ ಪಡೆದಿರುತ್ತಾರೆ ಇವರು ಬಾಳಿಲದ ಕೇಳು ಮಣಿಯಾಣಿ ಹಾಗೂ ವಾರಿಜ ದಂಪತಿಯ ಪುತ್ರಿ. ಬಿ.ಕಾಂ ವಿಭಾಗದಲ್ಲಿ ಶ್ರೀದೇವಿ ಕೆ. ಯವರು ಶೇ.94.71 ಅಂಕಗಳನ್ನು ಪಡೆದು 6ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಮುಕ್ರಂಪಾಡಿಯ ಮಹಾಬಲ ಭಟ್ ಕೆ. ಹಾಗೂ ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ ವಿಭಾಗದ ಮುಖ್ಯಸ್ಥ ಪ್ರೇಮಲತಾ ಕೆ. ದಂಪತಿಯ ಪುತ್ರಿ. ಬಿಕಾಂ ವಿಭಾಗದಲ್ಲಿ ಪ್ರತಿಮಾ ಎ.ರವರು ಶೇ.94.57 ಅಂಕಗಳಿಸುವುದರ ಮೂಲಕ 7ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಅಡೂರಿನ ಶ್ರೀಪ್ರಸಾದ್ ಹಾಗೂ ಪದ್ಮಾ ದಂಪತಿಯ ಪುತ್ರಿ, ನಿಶಾಪ್ರಭಾ ಎನ್.ರವರು ಶೇ.93.89 ಅಂಕಗಳನ್ನು ಪಡೆದು 10ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಮೊಟ್ಟೆತಡ್ಕದ ಚಂದ್ರಶೇಖರ ಎನ್. ಮತ್ತು ಭಾರತಿ ದಂಪತಿಯ ಪುತ್ರಿ.

ಸ್ನಾತಕೋತ್ತರ ವಿಭಾಗ: ಸ್ನಾತಕೋತ್ತರ ಗಣಕವಿಜ್ಞಾನ ವಿಭಾಗದಲ್ಲಿ ದೀಪ್ತಿ ವಿ.ರವರು 9.19 ಸಿಜಿಪಿಎಯೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಇವರು ಬನ್ನೂರಿನ ವಿಜಯ ಕುಮಾರ್ ಮತ್ತು ವಿಮಲಾಕ್ಷಿ ದಂಪತಿಯ ಪುತ್ರಿ. ಎಂಕಾಂ ವಿಭಾಗದಲ್ಲಿ ಕಾಲೇಜಿಗೆ ಒಟ್ಟು 11 ರ‍್ಯಾಂಕ್‌ಗಳು ದೊರೆತಿವೆ. ಅನ್ಶರವರು 8.57 ಸಿಜಿಪಿಎಯೊಂದಿಗೆ 2 ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಪಯ್ಯನ್ನೂರಿನ ಉಣ್ಣಿ ಕೃಷ್ಣನ್ ಹಾಗೂ ಶೀಜಾ ದಂಪತಿಯ ಪುತ್ರಿ. ಅಪೂರ್ವ ಪಿವಿ ರವರು 8.47ಸಿಜಿಪಿಎ ಪಡೆದು 3 ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಆರ್ಯಾಪು ನಿವಾಸಿ ವಸಂತ ಕುಮಾರ್ ಹಾಗೂ ಪುಷ್ಪಲತಾ ದಂಪತಿಯ ಪುತ್ರಿ. ವಿನೋಲಿಯಾ ಜಸ್ಲಿನ್ ಮಿನೇಜಸ್ ರವರು ರವರು 8.47ಸಿಜಿಪಿಎ ಪಡೆದು 3 ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಸೇಡಿಯಾಪಿನ ದಿ| ವಿಕ್ಟರ್ ಮಿನೇಜಸ್ ಮತ್ತು ಜಾನೆಟ್ ಮಿನೇಜಸ್ ದಂಪತಿಯ ಪುತ್ರಿ. ಶ್ಲಾಘ್ಯ ಆಳ್ವ ಕೆ. ಇವರು 8.43 ಸಿಜಿಪಿಎ ಪಡೆದು 4ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ರಾಮಕುಂಜದ ಬಾಲಕೃಷ್ಣ ಆಳ್ವ ಮತ್ತು ಶೈಲಜಾ ದಂಪತಿಯ ಪುತ್ರಿ. ಶ್ರಾವ್ಯ ಎನ್.ಕೆ ರವರು 8.43ಸಿಜಿಪಿಎ ಪಡೆದು 4ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಕಡಬದ ನಾರಾಯಣ ಕೊರ್ನಾಯ ಹಾಗೂ ಪದ್ಮಲತಾ ದಂಪತಿಯ ಪುತ್ರಿ. ಶ್ರೀಲಕ್ಷ್ಮಿ ಭಟ್ ಕೆ. ರವರು 8.43ಸಿಜಿಪಿಎ ಪಡೆದು 4ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಉಪ್ಪಿನಂಗಡಿಯ ಶ್ರೀಕಾಂತ್ ಭಟ್ ಹಾಗೂ ಸವಿತಾ ದಂಪತಿಯ ಪುತ್ರಿ. ಬಾಸಿಲರವರು 8.4 ಸಿಜಿಪಿಎ ಗಳಿಸಿ 5ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಕೂರ್ನಡ್ಕದ ಯೂಸುಫ್ ಮತ್ತು ಆಸ್ಮಾ ದಂಪತಿಯ ಪುತ್ರಿ. ಸಿಎಸ್ ಜಯಶ್ರೀ 8.4 ಸಿಜಿಪಿಎ ಗಳಿಸಿ 5ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಬೆಳ್ಳಾರೆಯ ಸತ್ಯಶಂಕರ ಹಾಗೂ ಸುಮಂಗಲ ದಂಪತಿಯ ಪುತ್ರಿ. ಚೈತ್ರಾ ಬಿ. 8.4 ಸಿಜಿಪಿಎ ಗಳಿಸಿ 5ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ರಾಮಕುಂಜದ ಈಶ್ವರ ಗೌಡ ಮತ್ತು ಸರಸ್ವತಿ ದಂಪತಿಯ ಪುತ್ರಿ. ಹರಿಣಿ ಎಸ್. ಪೈ ರವರು 8.33 ಸಿಜಿಪಿಎ ಗಳಿಸಿ 7ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ನರಸಿಂಹ ಪೈ ಮತ್ತು ನಿಶಾ ಪೈ ದಂಪತಿಯ ಪುತ್ರಿ. ಹರ್ಷಿತ ಎಸ್.ರವರು 8.23 ಸಿಜಿಪಿಎ ಗಳಿಸಿ 10 ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಈಶ್ವರಮಂಗಲದ ಲಂಬೋದರ ರೈ ಹಾಗೂ ಬೇಬಿ ರೈ ದಂಪತಿಯ ಪುತ್ರಿ. ಜೋತ್ಸ್ನಾ ಸಿಜೆ ರವರು 8.23 ಸಿಜಿಪಿಎ ಗಳಿಸಿ 10 ನೇ ರ‍್ಯಾಂಕ್ ಪಡೆದಿರುತ್ತಾರೆ. ಇವರು ಕಡಬದ ಜೋಸೆಫ್ ಸಿವಿ ಮತ್ತು ವಲ್ಸ ದಂಪತಿಯ ಪುತ್ರಿ.‌

ಬಿ.ಎಸ್ಸಿಯಲ್ಲಿ ಸ್ವರ್ಣ ಪದಕ: ಕೃಪಾಲಿ ಕೆ.ಪಿ ಇವರಿಗೆ ಬಿಎಸ್ಸಿ (ಬಿಝಡ್‌ಸಿ) ವಿಭಾಗದಲ್ಲಿ ಡಾ| ಟಿಎಂಎಪೈ ಸ್ವರ್ಣಪದಕವು ಲಭಿಸಿರುತ್ತದೆ. ಇವರು ಆರ್ಯಾಪು ಗ್ರಾಮದ ಮುರಳೀಧರ ಕೆ.ಪಿ ಮತ್ತು ಮಲ್ಲಿಕಾ ದಂಪತಿಯ ಪುತ್ರಿ.

ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವಜನರನ್ನು ವಿಚಲಿತಗೊಳಿಸುವ ಹಲವಾರು ವಿಷಯಗಳಿರುತ್ತವೆ. ಅವೆಲ್ಲವನ್ನೂ ಮೀರಿ ನಿಂತ ಈ ವಿದ್ಯಾರ್ಥಿಗಳ ಸಾಧನೆ ಅಪ್ರತಿಮವಾದುದು. ಅವರಿಗೆ ನಿರಂತರ ಪ್ರೋತ್ಸಾಹ ನೀಡಿದ ಹೆತ್ತವರಿಗೂ ಮಾರ್ಗದರ್ಶನ ನೀಡಿದ ಶಿಕ್ಷಕರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳ ಭವಿಷ್ಯವು ಉಜ್ವಲವಾಗಲಿ.
ಡಾ| ಆಂಟನಿ ಪ್ರಕಾಶ್ ಮೊಂತೆರೋ ಕಾಲೇಜಿನ ಪ್ರಾಂಶುಪಾಲ

LEAVE A REPLY

Please enter your comment!
Please enter your name here