ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ‘ಆಫ್ಟರ್ ಪಿಯುಸಿ ವಾಟ್ ನೆಕ್ಸ್ಟ್’

0

ವಿದ್ಯಾವಂತ ಯುವ ಸಮೂಹ ಪುತ್ತೂರಿನ ಹೆಮ್ಮೆ: ಬಲರಾಮ ಆಚಾರ್ಯ

ಪುತ್ತೂರು: ಪುತ್ತೂರು ಹತ್ತೂರಿನಲ್ಲೂ ಹೆಸರು ಪಡೆದ ಊರು. ಇಲ್ಲಿನ ವಿದ್ಯಾವಂತ ಯುವ ಸಮೂಹ ಪುತ್ತೂರಿನ ಹೆಮ್ಮೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಪ್ರಗತಿಯ ಹಾದಿಯಲ್ಲಿ ಸಾಗುವ ಶೈಕ್ಷಣಿಕ, ಸಮಾಜಮುಖಿ ಕಾರ್ಯವನ್ನು ಪ್ರಗತಿಯ ಸ್ಟಡಿ ಸೆಂಟರ್‌ನ ಸ್ಥಾಪಕಾಧ್ಯಕ್ಷರಾದ ಗೋಕುಲ್‌ನಾಥ್ ಪಿ.ವಿ ಮತ್ತು ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಮಾಡುತ್ತಿರುವುದು ತುಂಬಾ ಅಭಿನಂದನೀಯ ಕಾರ್ಯಕ್ರಮ. ಬೆಂಗಳೂರಿನ Sky Bird Aviation ಸಂಸ್ಥೆಯ ಸಂಪನ್ಮೂಲರು ನಮ್ಮ ಪುತ್ತೂರಿಗೆ ಬಂದು ನಮ್ಮ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದು ನಮ್ಮ ಯುವಜನತೆಯ ಮುಂದಿನ ಹಾದಿ ಸುಗಮವಾಗಲು ನಾಂದಿಯಾಗಲಿ ಎಂದು ಪುತ್ತೂರು ಜಿ.ಎಲ್.ಆಚಾರ್ಯ ಸಂಸ್ಥೆಯ ಮುಖ್ಯಸ್ಥ ಬಲರಾಮ ಆಚಾರ್ಯ ಹೇಳಿದರು.

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ’ಆಫ್ಟರ್ ಪಿಯುಸಿ ವಾಟ್ ನೆಕ್ಸ್ಟ್’ ಎನ್ನುವ ವಿನೂತನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೀಪ ಪ್ರಜ್ವಲನಗೊಳಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ನಗರಸಭೆಯ ಉಪಾಧ್ಯಕ್ಷೆ ವಿದ್ಯಾಗೌರಿ ಅವರು ಮಾತನಾಡುತ್ತಾ “ಪ್ರಗತಿ ಸಂಸ್ಥೆಯು ಯಾವುದೇ ವಿದ್ಯಾಲಯ ಮಾಡದೇ ಇರುವ ಕಾರ್ಯವನ್ನು ಮಾಡುವ ಮೂಲಕ ಮಕ್ಕಳನ್ನು ಭವಿಷ್ಯದತ್ತ ಕೊಂಡೊಯ್ಯುವ ಹೊಸ ದಿಕ್ಕನ್ನು ತೋರಿಸುವ ಕಾರ್ಯಮಾಡುತ್ತಿದೆ. ಯುವ ಸಬಲೀಕರಣಕ್ಕೆ ಪೂರಕವಾದ ಸರಕಾರದ ಯೋಚನೆ ಯೋಜನೆಗಳಿಗೆ ಬೆಳಕುಚೆಲ್ಲುವ ಕಾರ್ಯ ಸಮಾಜ, ಸಂಘ ಸಂಸ್ಥೆಗಳಿಂದ ಆದಾಗ ಉತ್ತಮ ನಾಗರಿಕ ಸಮಾಜದ ನಿರ್ಮಾಣವಾಗುವುದು. ಇಂದು ನಮ್ಮ ದೇಶ ಜ್ಞಾನ ಸಂಪನ್ಮೂಲತೆಯಿಂದ ವಿಶ್ವದ ಗಮನ ಸೆಳೆಯುತ್ತಿದೆ.ವಿದ್ಯಾರ್ಥಿ ಯುವ ಸಮಾಜ ಕ್ರಿಯಾಶೀಲ ನಾಗರಿಕರಾದಾಗ ರಾಷ್ಟ್ರದ ಭವಿಷ್ಯ ರೂಪುಗೊಳ್ಳುವುದು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಬೆಂಗಳೂರಿನ Sky Bird Aviation ಸಂಸ್ಥೆಯ ಪ್ರಾಂಶುಪಾಲರಾದ ಕೆಂಪರಾಜು ಬಿ.ಜೆ ಇವರು ಲಭ್ಯವಿರುವ ವಿವಿಧ ಕೋರ್ಸುಗಳ ಮಾಹಿತಿ ನೀಡುತ್ತಾ ನಮ್ಮ ವಿದ್ಯಾರ್ಥಿಗಳು ನಮ್ಮ ರಾಷ್ಟ್ರದ ಭವಿಷ್ಯ.ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ನಮ್ಮ ಜವಾಬ್ದಾರಿಯಾಗಿದೆ.ಈ ನಿಟ್ಟಿನಲ್ಲಿ ಪುತ್ತೂರು ಪ್ರಗತಿ ಸ್ಟಡಿ ಸೆಂಟರಿನ ಮುಖ್ಯಸ್ಥರಾಗಿರುವ ಗೋಕುಲ್‌ನಾಥ್ ಪಿ.ವಿ, ದಂಪತಿ ಅಭಿನಂದನೀಯ ಎಂದರು. ಕಾರ್ಯಕ್ರಮದಲ್ಲಿ ಬೆಂಗಳೂರು Sky Bird Aviation ಸಂಸ್ಥೆಯ ಸಹಾಯಕ ಪ್ರೊಫೆಸರ್ ಶ್ರೀಮತಿ ಮಂಜುಕಿರಣ್ Skybird students are working with major airlines and airports in the Industry..ಎಂದು ಉಲ್ಲೇಖಿಸಿ ವಿವಿಧ ಕೋರ್ಸುಗಳ ಮಾಹಿತಿ ನೀಡಿದರು.

ಪುತ್ತೂರು ಸುದ್ದಿ ಬಿಡುಗಡೆಯ ಸಿಇಒ ಸೃಜನ್‌ರವರು ಮಾತನಾಡುತ್ತಾ “ಇಂದಿನ ಈ ವೈಜ್ಞಾನಿಕ ಯುಗದಲ್ಲಿ ಜಗತ್ತೇ ಇಂದು ಬೆರಳತುದಿಯಲ್ಲಿದೆ. ತಂತ್ರಜ್ಞಾನ ತ್ವರಿತಗತಿಯಲ್ಲಿ ಸಾಗುತ್ತಿದೆ. ಭವಿಷ್ಯತ್ತಿನಲ್ಲಿ ಎಲೆಕ್ಟ್ರಾನಿಕ್ ಯುಗವೇ ಮುಖ್ಯವಾಗಿರುವ ಕಾರಣ ನಮ್ಮ ಯುವ ಜನತೆ ಸೂಕ್ತ ಆಯ್ಕೆಯನ್ನು ಮಾಡುವ ಅಗತ್ಯವಿದೆ. ಪ್ರಗತಿ ಸ್ಟಡಿ ಸೆಂಟರಿನ ವಿದ್ಯಾರ್ಥಿಗಳು ಸೋತವರಲ್ಲ. ಭವಿಷ್ಯತ್ತಿನ ಸಾಧಕರು ಎಂದು ಹೇಳಿ ಶುಭಹಾರೈಸಿದರು.

ಪ್ರಗತಿ ಸ್ಟಡಿ ಸೆಂಟರಿನ ಸ್ಥಾಪಕಾಧ್ಯಕ್ಷ, ಮುಖ್ಯಸ್ಥರೂ ಆಗಿರುವ ಗೋಕುಲ್ ನಾಥ್ ಪಿ.ವಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ Sky Bird Avition ನಮ್ಮ ಪುತ್ತೂರಿಗೆ ಬಂದುAirlines ಮತ್ತು Airportsನ ವಿವಿಧ ಕೋರ್ಸ್‌ಗಳ ಮಾಹಿತಿ ನೀಡುತ್ತಿರುವುದು, ನಮ್ಮ ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಒಂದು ಕೈದೀವಿಗೆ. ನಮ್ಮ ವಿದ್ಯಾರ್ಥಿಗಳು ಪಿ.ಯು.ಸಿಯ ನಂತರ ಉತ್ತಮ ವಿದ್ಯಾಸಂಸ್ಥೆಯನ್ನು ಹಾಗೂ ಬದುಕನ್ನು ರೂಪಿಸುವ ಕೋರ್ಸುಗಳನ್ನು ಆಯ್ಕೆ ಮಾಡುವುದರ ಮೂಲಕ ತಾನು ಮತ್ತು ತನ್ನ ಸಂಸ್ಥೆ ಬೆಳೆಯಲು ಸಾಧ್ಯ.ಸರಕಾರ ಕೆಲವೊಂದು ಉದ್ದೇಶಗಳಿಗೆ ಸರಕಾರಿ ಸ್ಥಳಗಳನ್ನು ಮೀಸಲಿಡುವಾಗ ಪುತ್ತೂರನ್ನೂ ಒಂದು ವಿದ್ಯಾಕಾಶಿಯನ್ನಾಗಿಸುವ ನೆಲೆಯಲ್ಲಿ ಚಿಂತನೆ ಮಾಡುವಂತಾಗಲಿ..”ಎಂದರು.

ಪತ್ರಕೋದ್ಯಮ ಕ್ಷೇತ್ರದ ಸಾಧನೆಗೆ “ಮೊಹರೆ ಹಣಮಂತರಾಯ ಪತ್ರಿಕೋದ್ಯಮ” ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸಸ್ಯಜಾತ್ರೆ 23ರ ಖ್ಯಾತಿಗೆ ಕಾರಣರಾದ ಮತ್ತು ಪ್ರಗತಿ ವಿದ್ಯಾಸಂಸ್ಥೆಯ ಹಿತೈಷಿಗಳೂ ಆಗಿರುವ ಡಾ.ಯು.ಪಿ ಶಿವಾನಂದರಿಗೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಪಿ.ವಿ. ಗೋಕುಲ್‌ನಾಥ್ ಹೇಳಿದರು.

Skybird Aviation bengaluru ಇಲ್ಲಿನ ಸಿಬ್ಬಂದಿಗಳಾದ ಶ್ರೀಮತಿ ಉಷಾಮೂರ್ತಿ, ಮಲ್ಲಪ್ಪ, ಪುತ್ತೂರು ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ, ಪ್ರಗತಿ ಸ್ಟಡಿ ಸೆಂಟರಿನ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಗೋಕುಲ್‌ನಾಥ್, ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಎನ್.ಡಿ. ಉಪನ್ಯಾಸಕ ವೃಂದ, ವಿದ್ಯಾರ್ಥಿ ವೃಂದ, ಪೋಷಕರು, ಕಛೇರಿ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕು.ಖುಷಿ ಮತ್ತು ಕು.ಮಿನೀಷ ಪ್ರಾರ್ಥಿಸಿದರು. ಉಪನ್ಯಾಸಕಿ ಕು.ಶುಭ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಕು.ಹರ್ಷಿತಾ ಸ್ವಾಗತಿಸಿದರು. ಉಪನ್ಯಾಸಕಿ ಕು.ಕಾವ್ಯ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here