ಉಪ್ಪಿನಂಗಡಿ: ಇಲ್ಲಿನ ಬಹುಮಹಡಿ ಕಟ್ಟಡವಾದ ಪೃಥ್ವಿ ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಾ.೧೭ರಂದು ಅಪರಾಹ್ನ ನಡೆದಿದ್ದು, ಸಕಾಲದಲ್ಲಿ ಬೆಂಕಿ ನಂದಿಸಿದ್ದರಿಂದ ಸಂಭವನೀಯ ಅನಾಹುತಗಳು ತಪ್ಪಿದಂತಾಗಿವೆ.
ಇಲ್ಲಿನ ಅಂಚೆಕಚೇರಿ ಬಳಿ ಇರುವ ಪೃಥ್ವಿ ವಾಣಿಜ್ಯ ಸಂಕೀರ್ಣದ ಪ್ರಥಮ ಮಹಡಿಯಲ್ಲಿರುವ ವಿದ್ಯುತ್ ಮೀಟರ್‌ಗಳ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಮೀಟರ್‌ಗಳು ಧಗಧಗನೇ ಹೊತ್ತಿ ಉರಿಯಲಾರಂಭಿಸಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸಕಾಲದಲ್ಲಿ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದ್ದರಿಂದ ಸಂಭವನೀಯ ಅಪಾಯ ತಪ್ಪಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ವಿದ್ಯುತ್ ಅವಘಡಕ್ಕೆ ಕಾರಣವೆಂದು ಅಂದಾಜಿಸಲಾಗಿದೆ.