ನಾರ್ಯಬೈಲು ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ

0

ಕಾಣಿಯೂರು: ಬೆಳಂದೂರು ಗ್ರಾ.ಪಂ.ವ್ಯಾಪ್ತಿಯ ನಾರ್ಯಬೈಲು ಎಂಬಲ್ಲಿ ನೂತನವಾಗಿ ಮಂಜೂರುಗೊಂಡ ಅಂಗನವಾಡಿ ಕೇಂದ್ರವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಉದ್ಘಾಟಿಸಿ ಶುಭಹಾರೈಸಿದರು.

ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಗ್ರಾ.ಪಂ.ಸದಸ್ಯರಾದ ಮೋಹನ್ ಅಗಳಿ, ವಿಠಲ ಗೌಡ ಅಗಳಿ, ಪಾರ್ವತಿ ಮರಕ್ಕಡ, ಪ್ರವೀಣ್ ಕೆರೆನಾರು, ಜಯಂತ ಅಬೀರ, ಜಯರಾಮ ಬೆಳಂದೂರು, ಗೌರಿ ಮಾದೋಡಿ, ಗೀತಾ ಕುವೆತ್ತೋಡಿ, ತಾರಾ ಅನ್ಯಾಡಿ ಹರಿಣಾಕ್ಷಿ ಬನಾರಿ, ಕುಸುಮಾ ಅಂಕಜಾಲು, ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀಲತಾ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ತಿಮ್ಮಪ್ಪ ಗೌಡ ಮುಂಡಾಲ, ಸೀತಾರಾಮ ಗೌಡ ಮುಂಡಾಲ, ಭಾಸ್ಕರ ಕಳುವಾಜೆ, ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವೀಚಾರಕಿ ವನಿತಾ, ಪುಷ್ಪಾವತಿ ಕಳುವಾಜೆ, ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಗಾಯತ್ರಿ ಮರಕ್ಕಡ, ಕಾಯಿಮಣ ಕೃಷ್ಣಪುರ ಜೋಕಾಲಿ ಬಳಗದ ಅಧ್ಯಕ್ಷ ಚಂದ್ರಶೇಖರ ಮುಂಡಾಲ, ಕಾರ್ಯದರ್ಶಿ ಪವನ್ ಮರಕ್ಕಡ, ವಿಜೇತ್ ಮುಂಡಾಲ, ಪ್ರವೀಣ್ ಮರಕ್ಕಡ, ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here