ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ರಸ್ತೆ ಕಾಂಕ್ರಿಟೀಕರಣ, ಇಂಟರ್ ಲಾಕ್ ಅಳವಡಿಕೆ ಕಾಮಗಾರಿ ಉದ್ಘಾಟನೆ

0

ಶಾಸಕನಾಗಿ ನಾನು ನನ್ನ ಧರ್ಮ, ಕರ್ತವ್ಯವನ್ನು ಮಾಡಿದ್ದೇನೆ: ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

ವಿಟ್ಲ: ಶಾಸಕನಾಗಿ ನಾನು ನನ್ನ ಧರ್ಮ ಹಾಗೂ ಕರ್ತವ್ಯವನ್ನು ಮಾಡಿದ್ದೇನೆ. ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸುವ ಕೆಲಸ ಹೆಚ್ಚಾಗಬೇಕು. ನಾನು ಶಾಸಕನ ನೆಲೆಯಲ್ಲಿ ಕೆಲಸ ಮಾಡಿದ್ದೇನೆ. ಸುಳ್ಳು ಹೇಳಿ ರಾಜಕೀಯ ಮಾಡುವ ಕಾಲ ಕಳೆದುಹೋಗಿದೆ. ನಾವು ಏನೇ ಅಭಿವೃದ್ಧಿ ಕೆಲಸ ಮಾಡಿದ್ದರೂ ಅದು ಪಾರದರ್ಶಕವಾಗಿದೆ. ನಿಮ್ಮೆಲ್ಲರ ಸಹಕಾರದಿಂದ ನಾನು ಶಾಸಕನಾದೆ. ಅವಕಾಶ ನೀಡಿದ ನಿಮಗೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಹೇಳಿದರು.


2 ಕೋಟಿ ರೂ. ವೆಚ್ಚದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಕಾಂಕ್ರಿಟೀಕರಣ ರಸ್ತೆ ಹಾಗೂ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.


ಜನರನ್ನು ಮುಟ್ಟುವ, ಅರ್ಥಮಾಡಿಕೊಳ್ಳುವ ಕೆಲಸ ಕೊರೋನಾ ಸಂದರ್ಭದಲ್ಲಿ ಆಗಿದೆ. ಬಂಟ್ವಾಳ ಆಸ್ಪತ್ರೆಗೆ ಬೇಕಾದ ಎಲ್ಲಾ ಸೌಲಭ್ಯವನ್ನು ನೀಡಿ ಸುಸಜ್ಜಿತಗೊಳಿಸಲಾಗಿದೆ. ಇದೀಗ ಆಸ್ಪತ್ರೆಯಲ್ಲಿ ದಿನದಲ್ಲಿ 72 ಮಂದಿಗೆ ಉಚಿತ ಡಯಾಲಿಸಿಸ್ ನಡೆಸುವ ವ್ಯವಸ್ಥೆಯಾಗಿದೆ. ಜನರಿಗೆ ವಿದ್ಯೆ ಆರೋಗ್ಯ ಅತೀ ಮುಖ್ಯ. ಅದನ್ನು ನೀಡುವ ಪ್ರಯತ್ನ ಮಾಡಲಾಗುತ್ತಿದೆ. ನನ್ನ ಅವಧಿಯಲ್ಲಿ ನಾನು ನ್ಯಾಯ ನೀಡುವ ಕೆಲಸವನ್ನು ಮಾಡಿದ್ದೇನೆ. ನಮ್ಮ ಮನಸ್ಸಿನ ಭಾವನೆಯನ್ನು ತುಲನೆ ಮಾಡುವ ಪ್ರಯತ್ನ ಎಲ್ಲರಿಂದ ಆಗಬೇಕಿದೆ ಎಂದರು.


ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾಧವ ಮಾವೆರವರು ಮಾತನಾಡಿ ರಾಜೇಶ್ ನಾಯ್ಕ್ ರವರು ತನ್ನ ಕ್ಷೇತ್ರದಲ್ಲಿ ಈವರೆಗೆ ಆಗದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚಿತ್ರಣವನ್ನು ಬದಲಿಸುವ ಕೆಲಸ ಅವರಿಂದಾಗಿದೆ. ರಾಜ ಧರ್ಮವನ್ನು ಪಾಲನೆಮಾಡಿದ ಶಾಸಕರಿವರು. ದೂರದೃಷ್ಟಿತ್ವದಿಂದ ಕೆಲಸ ಮಾಡಿದ ಶಾಸಕರಲ್ಲಿ ಮೊದಲಿಗರಿವರು ಎಂದರು.


ಮಾಣಿಗುತ್ತು ಸಚಿನ್ ರೈ ಮಾಣಿ, ಸಂತೋಷ್ ಶೆಟ್ಟಿ ಅರೆಬೆಟ್ಟು, ರತ್ನಾಕರ ಭಂಡಾರಿ, ಮಾಣಿ ಗ್ರಾ.ಪಂ. ಸದಸ್ಯರಾದ ನಾರಾಯಣ ಶೆಟ್ಟಿ ತೋಟ, ಜಗನ್ನಾಥ ಚೌಟ ಬದಿಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ದೀಪ್ತಿ, ಸ್ತುತಿ ಪ್ರಾರ್ಥಿಸಿದರು. ರಾಜರಾಮ್ ಕಡೂರು ಸ್ವಾಗತಿಸಿದರು. ಗಣೇಶ್ ಬಾರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ.ಸದಸ್ಯರಾದ ನಾರಾಯಣ ಶೆಟ್ಟಿ ತೋಟ ವಂದಿಸಿದರು.

ಅಭಿವೃದ್ದಿ ಕಾಮಗಾರಿಗಳು:

೧೦ ಲಕ್ಷ ರೂ. ವೆಚ್ಚದ ಮಾಣಿ ಗ್ರಾಮದ ಮಂಟಮೆ ರಸ್ತೆ ಕಾಂಕ್ರಿಟೀಕರಣ
ಉದ್ಘಾಟನೆ, ೧೦ ಲಕ್ಷ ವೆಚ್ಚದ ಶಂಭುಗ ಬಾಯಿಲ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ, ೧೦ ಲಕ್ಷ ರೂ ವೆಚ್ಚದ ಬದಿಗುಡ್ಡೆ ದೇವಸ್ಥಾನದ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ,
೧೦ ಲಕ್ಷ ರೂ.ವೆಚ್ಚದ ವಾರಾಟ ಚಾವಡಿ ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ,
೩.೨೦ ಕೋಟಿ ರೂಪಾಯಿ ವೆಚ್ಚದ ಮಾಣಿ ಗ್ರಾಮದ
ಅರ್ಬಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಉದ್ಘಾಟನೆ,
೧೦ ಲಕ್ಷ ರೂ. ವೆಚ್ಚದ ಕಾಪಿಕಾಡು ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ,
೧೦ ಲಕ್ಷರೂ. ವೆಚ್ಚದ ಭರಣಿಕೆರೆ ಪಲ್ಕೆ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ,
೧೦ ಲಕ್ಷ ರೂ. ವೆಚ್ಚದ ಕೋಡಾಜೆ ಪಟ್ಲಕೋಡಿ
ರಸ್ತೆ ಕಾಂಕ್ರಿಟೀಕರಣವನ್ನು ಶಾಸಕರು ಉದ್ಘಾಟನೆ ಮಾಡಿದರು.

LEAVE A REPLY

Please enter your comment!
Please enter your name here