ಹಾರಾಡಿ ದ್ವಿಚಕ್ರ ವಾಹನ ಪಲ್ಟಿ – ಸವಾರನಿಗೆ ಗಾಯ

0

ಪುತ್ತೂರು: ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಹಾರಾಡಿಯಲ್ಲಿ ಮಾ.19ರ ರಾತ್ರಿ ನಡೆದಿದೆ.


ಸೇಡಿಯಾಪು ನಿವಾಸಿ ರಾಧಾಕೃಷ್ಣ ಎಂಬವರ ದ್ವಿಚಕ್ರ ವಾಹನ ಹಾರಾಡಿಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬದ ಬಳಿ ಪಲ್ಟಿಯಾಗಿತ್ತು. ಅಪಘಾತದಿಂದ ರಸ್ತೆಗೆ ಬಿದ್ದ ಸವಾರ ರಾಧಾಕೃಷ್ಣ ಗಾಯಗೊಂಡಿದ್ದರು. ಸ್ಥಳೀಯ ನಿವಾಸಿ ದಿಶಾ ಸಮಿತಿಯ ನಾಮ ನಿರ್ದೇಶಿತ ಸದಸ್ಯ ರಾಮ್‌ದಾಸ್ ಹಾರಾಡಿ ಮತ್ತು ಇತರರು ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

LEAVE A REPLY

Please enter your comment!
Please enter your name here