ಮಾ.23-ಎ.1: ಕಾವು ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ

0

ಪ್ರತಿ ದಿನ ಋಗ್ವೇದ ಪಾರಾಯಣ-ಭಜನಾ ಸಂಕೀರ್ತನೆ

ಮಾ.22ರಂದು ನೂತನ ಅಗ್ರಶಾಲೆಯ ಉದ್ಘಾಟನೆ-ಸಮರ್ಪಣೆ
ಮಾ.23ರಂದು ಧ್ವಜಾರೋಹಣ-ಮಹಾಮೃತ್ಯುಂಜಯ ಹೋಮ
ಮಾ.25ರಂದು ನಡುದೀಪೋತ್ಸವ
ಮಾ.26ರಂದು ದೊಡ್ಡ ದರ್ಶನಬಲಿ-ಅಮ್ಚಿನಡ್ಕಕ್ಕೆ ಸವಾರಿ
ಮಾ.27ರಂದು ಭಂಡಾರ ಬರುವುದು-ಅವಭೃತ ಸ್ನಾನ
ಮಾ.28ರಂದು ಬೆಡಿ ಸೇವೆ-ಧ್ವಜಾವರೋಹಣ

ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.23ರಿಂದ ಆರಂಭಗೊಂಡು ಎ.1ರವರೆಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳವರ ನೇತೃತ್ವದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ, ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.


ಋಗ್ವೇದ ಪಾರಾಯಣ-ಭಜನಾ ಸಂಕೀರ್ತನೆ:
ಶ್ರೀದೇವರ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ಮಾ.೨೩ರಿಂದ ಮೊದಲ್ಗೊಂಡು ಮಾ.೨೭ರವರೆಗೆ ಶ್ರೀ ಶಿವಯ್ಯ ಮಯ್ಯ ಉಪ್ಪಳರವರ ನೇತೃತ್ವದಲ್ಲಿ ಕ್ಷೇತ್ರ ಸಾನಿಧ್ಯವೃದ್ಧಿಗಾಗಿ ಋಗ್ವೇದ ಪಾರಾಯಣ ಮತ್ತು ಪ್ರತಿ ದಿನ ಸಂಜೆ ದೇವಳದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.


ಮಾ.22: ನೂತನ ಅಗ್ರಶಾಲೆಯ ಉದ್ಘಾಟನೆ:
ಶ್ರೀದೇವಳದಲ್ಲಿ ನಿರ್ಮಾಣ ಮಾಡಿರುವ ನೂತನ ಅಗ್ರಶಾಲೆಯ ಉದ್ಘಾಟನೆ ಮತ್ತು ಸಮರ್ಪಣೆ ಕಾರ್ಯಕ್ರಮವು ಮಾ.೨೨ರಂದು ನಡೆಯಲಿದೆ. ಬೆಳಿಗ್ಗೆ ಶ್ರೀದೇವಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ದುರ್ಗಾಪೂಜೆ ನಡೆಯಲಿದೆ.

ಮಾ.೨೩ರಂದು ಧ್ವಜಾರೋಹಣ:
ಮಾ.೨೩ರಂದು ಬೆಳಿಗ್ಗೆ ಉಗ್ರಾಣ ತುಂಬಿಸಿ ಬಲಿ ಹೊರಟು ಧ್ವಜಾರೋಹಣ ನಡೆಯಲಿದೆ. ಬಳಿಕ ಮಹಾ ಮೃತ್ಯುಂಜಯ ಹೋಮ, ಮಹಾಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಉತ್ಸವ ಬಲಿ ನಡೆಯಲಿದೆ. ಗೆಳೆಯರ ಬಳಗ ಕಾವು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರವಿಚಂದ್ರ ಬಿ ಸಾಲ್ಯಾನ್ ವೇಣೂರು ವಿರಚಿತ ಡಬಲ್ ಗೇಮ್ ತುಳು ಸಾಮಾಜಿಕ ನಾಟಕ ನಡೆಯಲಿದೆ.

ಮಾ:೨೪ರಂದು ಉತ್ಸವ ಬಲಿ:
ಮಾ.೨೪ರಂದು ಬೆಳಿಗ್ಗೆ ಉತ್ಸವ, ಮಧ್ಯಾಹ್ನ ಮಹಾಪೂಜೆ, ಶ್ರೀದೇವರ ಬಲಿ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಉತ್ಸವ ಬಲಿ ನಡೆಯಲಿದೆ. ಸಾಂಸ್ಕೃತಿಕ ವೇದಿಕೆಯಲ್ಲಿ ಕಾವು ನನ್ಯ ತುಡರ್ ಯುವಕ ಮಂಡಲದ ೧೨ನೇ ವಾರ್ಷಿಕೋತ್ಸವ-ತುಡರ್ ಹಬ್ಬದ ಕಾರ್ಯಕ್ರಮದಂಗವಾಗಿ ನೃತ್ಯಾರ್ಪಣ, ಸಾಂಸ್ಕೃತಿಕ ಕಲರವ, ಸಭಾಕಾರ್ಯಕ್ರಮ-ಸನ್ಮಾನ, ಸಮಾಜರತ್ನ ಲೀಲಾಧರ ಶೆಟ್ಟಿ ಸಾರಥ್ಯದಲ್ಲಿ ಶರತ್ ಉಚ್ಚಿಲ ನಿರ್ದೇಶನದ ಬಲೇ ತೆಲಿಪಾಲೆ ಖ್ಯಾತಿಯ ಪ್ರಶಸ್ತಿ ವಿಜೇತ ಪ್ರಶಂಸಾ ಕಾಪು ತಂಡದ ಕುಸಲ್ದ ಬಿರ್ಸೆ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಹಾಗೂ ತೆಲಿಕೆದ ಅರಸೆ ಪ್ರಸನ್ನ ಶೆಟ್ಟಿ ಬೈಲೂರು ಅಭಿನಯದಲ್ಲಿ ಕಾಪು ರಂಗತರಂಗ ಕಲಾವಿದರಿಂದ ಅಧ್ಯಕ್ಷೆರ್ ತುಳು ಹಾಸ್ಯಮಯ ಸಾಂಸಾರಿಕ ನಾಟಕ ನಡೆಯಲಿದೆ.

ಮಾ.೨೫: ನಡುದೀಪೋತ್ಸವ:
ಮಾ.೨೫ರಂದು ಬೆಳಿಗ್ಗೆ ಬಲಿ, ಮಧ್ಯಾಹ್ನ ಮಹಾಪೂಜೆ, ಶ್ರೀದೇವರ ಬಲಿ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ತಾಯಂಬಕ ಸೇವೆ, ನಡುದೀಪೋತ್ಸವ, ಉತ್ಸವ ಬಲಿ ನಡೆಯಲಿದೆ. ಸಾಂಸ್ಕೃತಿಕ ವೇದಿಕೆಯಲ್ಲಿ ವಾಗ್ದೇವಿ ಸಂಗೀತ ಶಾಲೆಯ ಗುರುಗಳಾದ ವಿದುಷಿ ಶ್ರೀಮತಿ ಸವಿತ ಹಾಗೂ ಶಿಷ್ಯರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಮಾ.೨೬: ದರ್ಶನ ಬಲಿ
ಮಾ.೨೬ರಂದು ಬೆಳಿಗ್ಗೆ ದೊಡ್ಡ ದರ್ಶನ ಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಉತ್ಸವ ನಡೆದು ಅಮ್ಚಿನಡ್ಕಕ್ಕೆ ಶ್ರೀದೇವರ ಸವಾರಿ ಮರಳಿ ಬಂದು ಶಯನ ನಡೆಯಲಿದೆ.

ಮಾ.೨೭: ಅವಭೃತ ಸ್ನಾನ:
ಮಾ.೨೭ರಂದು ಬೆಳಿಗ್ಗೆ ಬಾಗಿಲು ತೆರೆಯುವುದು, ನನ್ಯದಲ್ಲಿ ಮುಂಡ್ಯ ಹಾಕಲು ತೆರಳುವುದು, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಂಜಕೊಟ್ಯದಿಂದ ಶ್ರೀ ದಂಡನಾಯಕ ದೈವಗಳ ಭಂಡಾರ ಬರುವುದು, ಉತ್ಸವ ಬಲಿ, ಅವಭೃತ ಸ್ನಾನ ನಡೆಯಲಿದೆ. ಸಂಜೆ ಗಂಟೆ ೫.೪೫ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಪ್ರಭಾ ಸುಬ್ರಾಯ ಬಲ್ಯಾಯ ಸಂಸ್ಕೃತಿ ಮದ್ಲ ಇವರ ಸೇವೆಯಾಟವಾಗಿ ಶ್ರೀದೇವಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.

ಮಾ.೨೮: ಧ್ವಜಾವರೋಹಣ:
ಮಾ.೨೮ರಂದು ಬೆಳಿಗ್ಗೆ ಬೆಡಿಸೇವೆ ನಡೆದು ಸೂರ್ಯೋದಯಕ್ಕೆ ರಾಜಾಂಗಣದಲ್ಲಿ ಗಂಧಪ್ರಸಾದ ವಿತರಣೆ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯಲಿದೆ. ರಾತ್ರಿ ಶ್ರೀ ದಂಡನಾಯಕ ದೈವಗಳ ದೀವಟಿಗೆ ನಮಸ್ಕಾರ ನಡೆಯಲಿದೆ.

ಮಾ.೨೯: ಭಂಡಾರ ಹೋಗುವುದು:
ಮಾ.೨೯ರಂದು ರಾತ್ರಿ ಶ್ರೀ ದಂಡನಾಯಕ ದೈವಗಳ ಭಂಡಾರ ನನ್ಯಕ್ಕೆ ಹೋಗುವುದು. ಮಾ.೩೦ರಂದು ಬೆಳಿಗ್ಗೆ ನನ್ಯ ಮಾಡದಲ್ಲಿ ಶ್ರೀ ದಂಡನಾಯಕ ದೈವಗಳ ನೇಮ, ಮಾ.೩೧ರಂದು ಬೆಳಿಗ್ಗೆ ನನ್ಯದಲ್ಲಿ ರಾಜನ್‌ದೈವದ ನೇಮ, ಎ.೧ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಗುಳಿಗನ ಕೋಲ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ನಿಧಿಮುಂಡರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here