ಚುನಾವಣೆ ಬಂದಾಗ ಜಾತಿ, ಧರ್ಮ, ಬಾಷೆಗಿಂತಲೂ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಿ- ಪತ್ರಿಕಾಗೋಷ್ಠಿಯಲ್ಲಿ ಬಿ.ಎಮ್. ಭಟ್, ಪಿ.ಕೆ.ಸತೀಶನ್

0

ಪುತ್ತೂರು: ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಭರವಸೆ ಈಡೇರಿಸುವ ಆಶ್ವಾಶನೆಯನ್ನು ನೀಡುತ್ತಾರೆ. ಅವರ ಭರವಸೆ ಬದುಕಲು ಅನಿರ್ವಾಯತೆ ಇರುವರಿಗೆ ಸಹಾಯವಾಗುಂತಿರಬೇಕು. ದೇಶದ ಅಭಿವೃದ್ಧಿ ಜನರ ಅಭಿವೃದ್ಧಿಯಿಂದ ಅವಲಂಭಿಸಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ವಕೀಲರಾದ ಬಿ.ಎಂ. ಭಟ್ ಮತ್ತು ಹಿರಿಯ ವಕೀಲ ಪಿ.ಕೆ.ಸತೀಶನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಇಂದು ಅಭಿವೃದ್ದಿ ಹೆಸರಲ್ಲಿ ಏನೇನೋ ಮಾತಾಡುತ್ತಾರೆ. ಅಭಿವೃದ್ದಿ ಎಂದರೆ ರಸ್ತೆ ಅಗಲೀಕರಣ, ರೈಲು, ಕಟ್ಟಡಗಳ ನಿರ್ಮಾಣ ಮಾತ್ರವಲ್ಲ, ದೇಶದ ಜನರ ಅಗತ್ಯಗಳಾದ ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಮೊದಲಾದ ಜನ ಬದುಕಲು ಬೇಕಾದ ಅನಿವಾರ್ಯತೆಗಳ ಬಗ್ಗೆ ಗಮನ ನೀಡಿ ಒದಗಿಸಿದರೆ ಮಾತ್ರಾ ದೇಶ ಪೂರ್ಣ ಅಭಿವೃದ್ದಿ ಹೊಂದಲು ಸಾದ್ಯ ಎಂದು ಹೇಳಿದ ಅವರು ವಾಹನದ ಲೈಫ್ ಟ್ಯಾಕ್ಸ್‌ನಲ್ಲಿ, ಪೆಟ್ರೋಲ್ ಡೀಸಿಲ್‌ನಲ್ಲಿ, ಎಲ್ಲಾ ರಸ್ತೆ ತೆರಿಗೆ ವಸೂಲಿ ಮಾಡುವ ಸರಕಾರ ಪುನಃ ಟೋಲ್ ವಸೂಲಿ ಮಾಡುವುದು ಚುನಾವಣೆ ಯಾವ ವಿಚಾರಗಳಿಗೆ ಗಮನ ನೀಡಿ ನಡೆಯಬೇಕು ಎಂದು ಪ್ರಶ್ನಿಸಿದರು.


ರಾಜ್ಯ ವಿಧಾನ ಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಸಂದರ್ಭ ಜನ ಯಾವ ವಿಚಾರದ ಬಗ್ಗೆ ಚರ್ಚಿಸಿ ಮತದಾನ ಮಾಡಬೇಕು? ಯಾವ ವಿಚಾರಗಳು ಮುನ್ನಲೆಗೆ ಬಂದರೆ ಜನರ ಬದುಕು ಹಸನಾಗಬಹುದು ಹಾಗೂ ಅಭಿವೃದ್ದಿಯಾಗಬಹುದು ಎಂಬುದರ ಬಗ್ಗೆ ಚಿಂತನೆ/ಚರ್ಚೆ ನಡೆಸಬೇಕಾದ ಸಕಾಲ ಮತ್ತೆ ಬಂದಿದೆ. ಚುನಾವಣೆಯ ಪ್ರಮುಖ ವಿಚಾರಗಳಾಗಿ ಈ ಅಭಿವೃದ್ದಿ ಪರ ವಿಚಾರಗಳು ಚರ್ಚೆಗೆ ಬರುವಂತಾಗಬೇಕಿದೆ. ಇದ್ಯಾವುದರ ಬಗ್ಗೆಯೂ ಚುನಾವಣೆಯಲ್ಲಿ ಚರ್ಚಾ ವಿಷಯಗಳಾಗದೆ, ಕೇವಲ ಜಾತಿ ಧರ್ಮದ ಹೆಸರಲ್ಲಿ, ಚುನಾವಣೆ ನಡೆಸುವುದು, ಪ್ರಜಾಪ್ರಭುತ್ವ ರಾಷ್ಟ್ರಕ್ಕೆ, ರಾಷ್ಟ್ರದ ಸಂವಿಧಾನಕ್ಕೆ ಕಳಂಕತರುವುದಾಗಿದೆ.. ಜನರ ಬದುಕಿನ ಸಂಕಷ್ಟಕ್ಕೆ ಕಾರಣರಾದವರನ್ನೇ, ಜಾತಿ, ಧರ್ಮದ ಹೆಸರಲ್ಲಿ ಗೆಲ್ಲಿಸುತ್ತೇವೆ. ಮತ್ತೆ ಅಭಿವೃದ್ದಿಯ ಬಗ್ಗೆ ಯಾರು? ಯಾಕೆ ಚರ್ಚೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು ಇಂದು ಕೋಟಿ ಕೋಟಿ ರೂಪಾಯಿ ಚುನಾವಣೆಗೆ ವೆಚ್ಚ ಮಾಡುವವರು ನಮ್ಮ ಸೇವೆ ಮಾಡುವವರೆಂದು ನಂಬಲು ಸಾದ್ಯವೇ? ನಿಜವಾಗಿ ಸೇವೆ ಮಾಡುವವರನ್ನ ಜನ ಆರಿಸಬೇಕು, ಬದಲಿಗೆ ಬಂಡವಾಳ ಹೂಡಿಕೆಗೆಲ್ಲ ಬಯಸುವುದೆಂದರೆ ಲಾಭದ ದುರುದ್ದೇಶ ಇದೆ ಎಂದೇ ಅರ್ಥ ಅಲ್ಲವೇ ? ಅಂತವರನ್ನುಸೋಲಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಗೆ ಮಹತ್ವ ಇದೆ. ಜನರೇ ತಮ್ಮ ದೇಶದ ಆಡಳಿತ ನಡೆಸಲು ಯೋಗ್ಯರನ್ನು ಮತದಾನದ ಮೂಲಕ ಆರಿಸುವುದಕ್ಕೆ ಚುನಾವಣೆ ಎನ್ನುತ್ತೇವೆ. ಚುನಾವಣೆಯಲ್ಲಿ ಯಾವ ಅಭ್ಯರ್ಥಿಯನ್ನು ಗೆಲ್ಲಿಸಬೇಕು ? ಯಾಕೆ ಗೆಲ್ಲಿಸಬೇಕು? ಎಂಬುದು ಜನರ ಬದುಕಿನ ಭವಣೆಯ ಆಧಾರದಲ್ಲಿ, ಅಭಿವೃದ್ದಿಗೆ ಪೂರಕವಾದ ವಿಚಾರದಲ್ಲಿ ನಿರ್ಧಾರವಾಗಬೇಕು. ಬದಲಿಗೆ ಚುನಾವಣೆಯು ಜಾತಿ ಧರ್ಮ, ಭಾಷೆಯ ಆಧಾರದಲ್ಲಿ ನಡೆಯಬಾರದು. ಚುನಾವಣೆ ಸಮಯ ಜಾತಿ, ಧರ್ಮ, ಭಾಷೆ ಇತ್ಯಾದಿ ಭಾವನಾತ್ಮಕ ವಿಚಾರದಲ್ಲಿ ಚರ್ಚೆನಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆರೋಗ್ಯಕರ ವಿಚಾರವಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರ ಬದುಕಿನ ಮತ್ತು ದೇಶದ ಅಭಿವೃದ್ದಿಗಳ ಬಗ್ಗೆ ಹಾಗೂ ಜನರ, ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚೆ ನಡೆಯುವಂತಾಗಬೇಕು ಎಂಬುದು ಕಾರ್ಮಿಕ ವರ್ಗದ ಆಶಯ ಎಂದರು.

LEAVE A REPLY

Please enter your comment!
Please enter your name here