ಸಿಂಗಪುರ ಶಿಕ್ಷಣ ಕೇಂದ್ರ- ಕನ್ನಡ ಗೆಳೆಯರ ಬಳಗದಲ್ಲಿ ಜಯಪ್ರಕಾಶ್ ಪುತ್ತೂರು ರವರ ವಿಶೇಷ ಉಪನ್ಯಾಸ

0

ಪುತ್ತೂರು: ದೆಹಲಿಯ ಕೇಂದ್ರ ರಕ್ಷಣೆ ಸಂಶೋಧನೆ ಹಾಗೂ ಅನುಸಂಧಾನ ಸಂಸ್ಥೆಯ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ, ಹಿರಿಯ ರಾಷ್ಟ್ರೀಯ ತರಬೇತುದಾರ ಮೂಲತಃ ಪುತ್ತೂರಿನವರಾದ ಜಯಪ್ರಕಾಶ ರಾವ್ ಇತ್ತೀಚೆಗೆ ಸಿಂಗಪುರ ದೇಶದ ಏಮಿಟಿ ಗ್ಲೋಬಲ್ ಯುನಿವರ್ಸಿಟಿ ಯ ಅಂತರಾಷ್ಟ್ರಿಯ ಮೆನೇಜ್‌ಮೆ೦ಟ್ ವಿದ್ಯಾರ್ಥಿಗಳಿಗಾಗಿ ‘ವ್ಯವಹಾರ ನಿರ್ವಹಣೆಯಲ್ಲಿ ಮಾನವೀಯ ಸಂಬಂಧಗಳು’ ಎಂಬ ವಿಶೇಷ ಉಪನ್ಯಾಸವನ್ನು ನೀಡಿದರು.

ಏಮಿಟಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸೆಲ್ವ ಮಾರ್ತಿಯವರಿಂದ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡ ಜಯಪ್ರಕಾಶ್ ರಾವ್ ಅವರನ್ನು ಸ್ಥಳೀಯ ನಿದೇ೯ಶಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಸ್ವಾಗತಿಸಿದರು. ‘ಆಡಳಿತ ವ್ಯವಸ್ಥೆಯ ನಿರ್ವಹಣೆಯಲ್ಲಿ ಭಾರತೀಯ ವ್ಯವಸ್ಥೆ ಯಲ್ಲಿ ಯಾವತ್ತು ಮಾನವೀಯ ಸಂಬಂಧಗಳಿಗೆ ಒತ್ತು ನೀಡಿರುವ ನಿದಶ೯ನಗಳನ್ನು ವಿವರಿಸಿದ ರಾವ್ ಜೊತೆಯಲ್ಲಿ ಕಾಯ೯ ನಿರ್ವಹಿಸುವವರನ್ನು ಯಂತ್ರಗಳಂತೆ ಕಾಣಲಾಗದು’ ಎಂದರು.

ಜಯಪ್ರಕಾಶ್ ರಾವ್ ರವರು ಮೈಸೂರಿನ ಕರ್ನಾಟಕ ಪೋಲಿಸ್ ಅಕಾಡೆಮಿ, ರಾಜ್ಯ ಅಧಿಕಾರಿಗಳ ತರಬೇತಿ ಸಂಸ್ಥೆ ಹಾಗೂ ವಿವಿಧ ಬ್ಯಾಂಕ್ ಗಳಲ್ಲಿ ಕೂಡಾ ತರಬೇತಿ ನಡೆಸುತ್ತಿದ್ದಾರೆ. ಕನ್ನಡದ ಲೇಖಕರಾಗಿ ಡಾ.ಕಲಾಂ ಅವರ ಜನ್ಮಚರಿತ್ರೆ ‘ಅಗನಿಯ ರೆಕ್ಕೆಗಳು’ ಸೇರಿದಂತೆ 6 ಪುಸ್ತಕಗಳನ್ನು ಬರೆದಿದ್ದು ಅವು ಮರು ಮದ್ರಣಗೊಂಡಿವೆ. ಇದೇ ಸಂದಭ೯ದಲ್ಲಿ ಅವರು ಸಿಂಗಪುರ ಗೆಳೆಯರ ಬಳಗದಲ್ಲಿ ಕಲಾಂ ಜೀವನ ಧಮ೯ ಎಂಬ ಉಪನ್ಯಾಸ ನೀಡಿದರು.

LEAVE A REPLY

Please enter your comment!
Please enter your name here