





ಪುತ್ತೂರು: ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಸಹಕಾರ ಜ್ಯೋತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಸ್ವಉದ್ಯೋಗ ಮಾಹಿತಿ ಕಾರ್ಯಗಾರ ಸಂಘದ ಸಭಾಭವನದಲ್ಲಿ ನಡೆಯಿತು.


ಶಿಕ್ಷಕಿ ಸುಮನ ಮೂರ್ತಿಯವರು ಕಾರ್ಯಗಾರ ನಡೆಸಿಕೊಟ್ಟರು. ಸಂಘದ ನಿಕಟ ಪೂರ್ವ ಉಪಾಧ್ಯಕ್ಷರಾದ ಪ್ರೇಮಲತಾ ರಾವ್ ಟಿ. ರವರು ಮಹಿಳೆ ಸ್ವಉದ್ಯೋಗದಿಂದ ಯಾವ ರೀತಿ ಆರ್ಥಿಕವಾಗಿ ಕುಟುಂಬದೊಡಗೂಡಿ ಬದುಕಬಹುದೆಂದು ಕಿವಿಮಾತು ಹೇಳಿದರು. ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಅವರು ಅಧ್ಯಕ್ಷತೆ ವಹಿಸಿ ಸಂಘದ ಅಭಿವೃದ್ಧಿಗೆ ಸಹಕಾರ ಕೋರಿದರು.





ಮಾಜಿ ಅಧ್ಯಕ್ಷೆ ಮೋಹಿನಿ ದಿವಾಕರ್ ಸ್ವಾಗತಿಸಿ, ನಿರ್ದೇಶಕಿ ಮೋಹಿನಿ ಪಿ ನಾಯ್ಕ್ ವಂದಿಸಿದರು. ರೋಹಿಣಿ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕಿ ವಿದ್ಯಾ ಕಾರ್ಯಕ್ರಮ ನಿರೂಪಣೆ ಮಾಡಿದರು.








